Thursday, June 18, 2026
spot_imgspot_img
spot_imgspot_img

ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಂಭ್ರಮ – ಮಾಣಿ ವಲಯ ಸಮಿತಿ “ಜ್ಞಾನ ವಾಹಿನಿ” ಸರಣಿ ಕಾರ್ಯಕ್ರಮಗಳ ಚಾಲನೆ

- Advertisement -
- Advertisement -

ಮಾಣಿ : ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ಧ ಸಂಭ್ರಮದ ಸಲುವಾಗಿ ಬಂಟ್ವಾಳ ತಾಲೂಕಿನ ಮಾಣಿ ವಲಯ ಸಮಿತಿಯ ಮಾಣಿ, ಪೆರಾಜೆ, ಅನಂತಾಡಿ, ನೆಟ್ಲ ಮುಡ್ನೂರು, ಬರಿಮಾರು, ಕಡೇಶಿವಾಲಯ, ಕೆದಿಲ, ಪೆರ್ನೆ, ಬಿಳಿಯೂರು “ಜ್ಞಾನ ವಾಹಿನಿ” ಸರಣಿ ಕಾರ್ಯಕ್ರಮಗಳ ಚಾಲನೆಯು ಫೆ.24 ರಂದು ನೇರಳಕಟ್ಟೆಯ ಶ್ರೀ ಗಣೇಶೋತ್ಸವ ಸಮಿತಿಯ ಗಣೇಶ ಸಭಾಂಗಣದಲ್ಲಿ ನಡೆಯಿತು.

ಡಾ. ಎಸ್. ಪಿ ಗುರುದಾಸ್ ಮಂಗಳೂರು ಇವರಿಂದ “ಹನುಮದ್ಭಕ್ತಿ” ಎಂಬ ಹರಿಕಥಾ ಸತ್ಸಂಗ ಕಾರ್ಯಕ್ರಮವು ನೆರವೇರಿತು. ಅತಿಥಿಗಳಾಗಿ ರಾಮಚಂದ್ರ ಮೂಲ್ಯ, ಭೋಜ ನಾರಾಯಣ ಆಗಮಿಸಿದ್ದರು. ಉಗ್ಗಪ್ಪ ಶೆಟ್ಟಿ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಧನ್ಯವಾದ ಸಮರ್ಪಿಸಿದರು ಹಾಗೂ ನರಸಿಂಹ ಶೆಟ್ಟಿ ಮಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Related news

error: Content is protected !!