




ಪದ್ಯಾಣ: ಏಪ್ರಿಲ್ 7 ಮಂಗಳವಾರದಂದು ಬೆಳಿಗ್ಗೆ 7 ಗಂಟೆಯಿಂದ ದೀಪ ಬಲಿ, ಶ್ರೀ ಭೂತ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಬೆಳಗಿನ ಪೂಜೆ, ಸಂಪ್ರೋಕ್ಷಣೆ, ಮಧ್ಯಾಹ್ನ ಪೂಜೆ, ಮಹಾಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆಯಂತಹ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 11ರಿಂದ ಭಜನೆ ಶ್ರೀ ದುರ್ಗಾಬಿಕಾ ಭಜನಾ ಮಂಡಳಿ ಕಡಬ, ಶ್ರೀ ರಘುರಾಮ ಭಜನಾ ಮಂಡಳಿ ಮಿತ್ತನಡ್ಕ
ಬೆಳಗ್ಗೆ 11ರಿಂದ”ನಾದೋಪಾಸನೆ” ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕು. ಸೂಕ್ತಿ ಭಟ್ ಜಿ.ಸಿ ಮೈಸೂರು ಮತ್ತು ಬಳಗ
ಮಧ್ಯಾಹ್ನ 2ರಿಂದ “ನೃತ್ಯಾರ್ಪಣಂ-ಸಾಂಸ್ಕ್ರತಿಕ ವೈವಿದ್ಯ” ಪದ್ಯಾಣದ ಪುಟಾಣಿಗಳಿಂದ
ಸಂಜೆ 4.30ರಿಂದ ಕಾರ್ಯಕರ್ತ ಸಂಗಮ , ವಿಶೇಷ ಅತಿಥಿಗಳು ಜಗದೀಶ್ ಕಾರಂತ , ಕರ್ನಾಟಕ ಕ್ಷೇತ್ರಿಯ ಸಂಯೋಜಕರು ಹಿಂದೂ ಜಾಗರಣ ವೇದಿಕೆ, ಶ್ರೀ ಶರಣ್ ಕುಮಾರ್ ಪಂಪ್ ವೆಲ್ , ಸಹಕಾರ್ಯದರ್ಶಿ , ವಿಶ್ವಹಿಂದೂ ಪರಿಷತ್ ಮಂಗಳೂರು
ರಾತ್ರಿ 9 ಗಂಟೆಯಿಂದ ಶ್ರೀ ಧೂಮಾವತಿ ಹಾಗೂ ಕೊರತಿ ದೈವಗಳ ನೇಮ, ಬಟ್ಟಲು ಕಾಣಿಕೆ ಹಾಗೂ ಗಂಧ ಪ್ರಸಾದ ವಿತರಣೆಯ ಕಾರ್ಯಕ್ರಮ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀ ಲಲಿತ ಕಲಾವಿದರು (ರಿ.) ತಂಡವು “ಶ್ರೀ ಶನೀಶ್ವರ ಮಹಾತ್ಮೆ” ಪೌರಾಣಿಕ ನಾಟಕವನ್ನು ಪ್ರದರ್ಶಿಸಲಿದ್ದು, ಪಟ್ಲ ಭಾಗವತರ ದೀಪಕ ಮಾಲ ಹಾಡಿನೊಂದಿಗೆ ನಡೆಯಲಿದೆ.








