Saturday, August 15, 2026
spot_imgspot_img
spot_imgspot_img

ನಿಟಿಲಾಪುರ: (ಮೇ. 2-4) ಅತೀ ಮಹಾರುದ್ರಯಾಗ ಸಮಿತಿ ನಿಟಿಲಾಪುರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಅತೀ ಮಹಾರುದ್ರಯಾಗ

- Advertisement -
- Advertisement -

ನಿಟಿಲಾಪುರ: ಅತೀ ಮಹಾರುದ್ರಯಾಗ ಸಮಿತಿ ಮೊಗರನಾಡು ವತಿಯಿಂದ ಸಾವಿರ ಸೀಮೆ ನಿಟಿಲಾಪುರ ಕಲ್ಲಡ್ಕ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾಶೀಮಠ, ವಾರಾಣಾಸಿ ಇವರ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಅತೀ ಮಹಾರುದ್ರಯಾಗವು ಮೇ 2-5-2025ನೇ ಶುಕ್ರವಾರದಿಂದ 4-5-2025ನೇ ಆದಿತ್ಯವಾರದವರೆಗೆ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ದಿನಾಂಕ: 2-5-2025 ನೇ ಶುಕ್ರವಾರ ಬೆಳಗ್ಗೆ ಗಣಹವನ, ನಿಟಿಲಾಕ್ಷ ಸದಾಶಿವ ದೇವರಿಗೆ ಶತರುದ್ರಾಭಿಷೇಕ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.ಸಂಜೆ ವಾಸ್ತು ರಾಕ್ಷೋಘ್ನ ತೋರಣ ಮುಹೂರ್ತ, ದೇವತಾ ಪ್ರಾರ್ಥನೆ, ರಂಗಪೂಜೆ ನಡೆಯಲಿದೆ.ದಿನಾಂಕ: 03-05-2025ನೇ ಶನಿವಾರ ಬೆಳಿಗ್ಗೆ ಪುಣ್ಯಾಹ ನಾಂದಿ, ಮಹಾಸಂಕಲ್ಪ, ಬ್ರಹ್ಮಹೋಮ, ಗಣಪತಿ ಹೋಮ-108, ಪದಮಾನ ಪ್ರಾಯಶ್ಚಿತ ಕೂಷ್ಮಾಂಡ ಮಹಾಪ್ರಾಯಶ್ಚಿತ, ಪೂರ್ಣ ಗ್ರಹ ಶಾಂತಿ, ಮಂಟಪ ಸಂಸ್ಕಾರ, ಅಗ್ನಿಜನನ, ಅರಣಿ ಮಂಥನ ಪಂಚದುರ್ಗಾಹೋಮ, ಶಾಸ್ತಾರ ಹೋಮ ನಡೆಯಲಿದೆ. ಸಂಜೆ: 4 ಗಂಟೆಗೆ ಕಲ್ಲಡ್ಕದಿಂದ ಹಸಿರು ಹೊರಕಾಣಿಕೆ ಮತ್ತು ಸ್ವಾಮೀಜಿಯವರ ಆಗಮನವಾಗಲಿ ದೆ. ಬಳಿಕ ರಾತ್ರಿ 8 ಗಂಟೆಗೆ ಮಂಡಲ ಪೂಜೆ, ಕಲಶ ಪ್ರತಿಷ್ಠೆ, ಶತರುದ್ರ, ಅಷ್ಟಾವಾದನ, ಕುಂದ ಸಂಸ್ಕಾರ, ಅಗ್ನಿಜನನ ನಡೆಯಲಿದೆ.ದಿನಾಂಕ: 04-05-2025ನೇ ಆದಿತ್ಯವಾರ ಬೆಳಿಗ್ಗೆ 5 ಗಂಟೆಗೆ ಅತೀ ಮಹಾರುದ್ರಯಾಗ ನಡೆದು ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 8 ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!