Thursday, July 23, 2026
spot_imgspot_img
spot_imgspot_img

ವಿಟ್ಲ ತಾಲೂಕಿನ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ 501ನೇ ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ

- Advertisement -
- Advertisement -

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ ) ವಿಟ್ಲ. ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ಎ, ವಿಟ್ಲ ಬಿ, ಒಕ್ಕೆತ್ತೂರು. ವಿಟ್ಲ ತಾಲೂಕಿನ ಪ್ರಗತಿ ಬಂಧು, ಸ್ವಸಹಾಯ ಸಂಘಗಳಿಗೆ 501 ನೇ ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮವು, ವಿಟ್ಲ ಸುವರ್ಣ ರಂಗ ಮಂದಿರ ಪದವಿ ಪೂರ್ವ ಕಾಲೇಜು ನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರಾವಳಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ರವರು ವಿಟ್ಲ ತಾಲೂಕಿಗೆ 501ನೇ ಸದಸ್ಯರನ್ನು ಸಾಂಕೇತಿಕವಾಗಿ ಸೇರ್ಪಡೆಗೊಳಿಸಿ, ಯೋಜನೆಯು ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು. ಪೂಜ್ಯರು ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಹಾಗೂ ಒಕ್ಕೂಟ ನಿರ್ವಹಣೆ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮ ಸಂಘಟಿಸಿದ ಒಕ್ಕೂಟದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಮಾತಾಡಿದ ರಾಧಾಕೃಷ್ಣ ಆಡಳಿತ ಅಧಿಕಾರಿ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಇವರು ಮಾತನಾಡಿ ಗ್ರಾಮ ಅಭಿವೃದ್ಧಿ ಯೋಜನೆ ಮಾಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಅದರ ಸದುಪಯೋಗ ಪಡೆಕೊಳ್ಳುವ ಬಗ್ಗೆ ತಿಳಿಸಿ, ಯೋಜನೆಯಿಂದ ಪಡೆಕೊಂಡ ಸೌಲಭ್ಯಗಳನ್ನು ತಿಳಿಸಿ ಪೂಜ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ವಿಠಲ ಪ್ರೌಢಶಾಲೆಯ ಉಪಪ್ರಾಂಶುಪಾಲ ಕಿರಣ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲೆಗಳಿಗೆ ಮತ್ತು ಸಮುದಾಯಕ್ಕೆ ನೀಡುವ ಸೌಲಭ್ಯದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಹಾಗೂ ಸಂಸ್ಥೆಯು ಪೂಜ್ಯರಿಗೆ ಯಾವಾಗಲೂ ಆಭಾರಿಯೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಟೇಶ್ ವಿಟ್ಲ,ಸದಸ್ಯರು ಜನಜಾಗೃತಿ ವೇದಿಕೆ ವಿಟ್ಲವಲಯ, ಅಣ್ಣಪ್ಪ ಶಾಸ್ತಾನ ಉಪನ್ಯಾಸಕರು ವಿಟ್ಲ ಪದವಿಪೂರ್ವ ಕಾಲೇಜ್, ಮೋನಪ್ಪ ಗೌಡ ಶಿವಾಜಿನಗರ, ಸುರೇಶ್ ಗೌಡ ಯೋಜನಾಧಿಕಾರಿಗಳು, ಪ್ರಮೀಳಾ ಅಧ್ಯಕ್ಷರು ಪ್ರಗತಿ ಬಂದು ಸ್ವಸಹ ಸಂಘಗಳು ಒಕ್ಕೂಟ ವಿಟ್ಲ ವಲಯ, ಚಂದ್ರಹಾಸ ಶೌರ್ಯ ವಿಪತ್ತು ಘಟಕದ ಅಧ್ಯಕ್ಷರು. ಒಕ್ಕೂಟದ ಅಧ್ಯಕ್ಷರುಗಳಾದ ವಿಶ್ವನಾಥ್ ವಿ, ಪ್ರವೀಣ್ ಕುಮಾರ್, ಸವಿತಾ, ಗೋಪಾಲ ನೆಕ್ಕರೆ ಕಾಡು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಬಂದು ಸಂಘ, ಯೋಜನೆಯ ಹಿರಿಯ ಫಲಾನುಭವಿಗಳು, SSLC ಮತ್ತು PUC ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಒಕ್ಕೂಟಗಳ ನಿಕಟ ಪೂರ್ವ ಅಧ್ಯಕ್ಷರುಗಳನ್ನು ವಿಶೇಷವಾಗಿ ಗೌರವಿಸಲಾಯಿತು. ಸಭೆಯಲ್ಲಿರುವ ಅತಿಥಿಗಳನ್ನು ವಿಟ್ಲ ವಲಯದ ಮೇಲ್ವಿಚಾರಕ ಜಗದೀಶ್ ಪೂಜಾರಿ ಸ್ವಾಗತಿಸಿ, ಜನಾರ್ದನ ಪದ್ಮಶಾಲಿ ಧನ್ಯವಾದ ಮಾಡಿದರು.

ಸಭಾ ಕಾರ್ಯಕ್ರಮವನ್ನು ಸಂಘದ ಸದಸ್ಯ ಕೈರೊನ್ನಿಸ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ನಡೆಯಿತು.

- Advertisement -

Related news

error: Content is protected !!