Wednesday, July 22, 2026
spot_imgspot_img
spot_imgspot_img

ವಿಟ್ಲ: ಬಂಟ್ವಾಳ ತಾಲೂಕು 6ನೇ ಚುಟುಕು ಸಾಹಿತ್ಯ ಸಮ್ಮೇಳನ

- Advertisement -
- Advertisement -

ವಿಟ್ಲ: ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್, ವಿಠಲ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಪಲಿಮಾರು ಶ್ರೀ ಜನಾರ್ದನ ಪೈ ಸಭಾಂಗಣದ ರವಿವರ್ಮ ಕೃಷ್ಣರಾಜ ಅರಸು ವೇದಿಕೆಯಲ್ಲಿ ತಾಲೂಕು ಆರನೇ ಚುಟುಕು ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣಗೈದರು. ಚುಟುಕು ಸಾಹಿತ್ಯ ಧ್ವಜಾರೋಹಣವನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ನೆರವೇರಿಸಿದರು.ವಿಠಲ ಎಜುಕೇಶನ್ ಸೊಸೈಟಿ ಸದಸ್ಯ ನಿತ್ಯಾನಂದ ನಾಯಕ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.

ವಿಟ್ಲ ಅರಮನೆಯ ಬಂಗಾರು ಅರಸರ ಉಪಸ್ಥಿತಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಸಮಿತಿಯ ಪ್ರಧಾನ ಸಂಚಾಲಕ ಎಂ. ಜಿ. ಆ‌ರ್. ಅರಸು ಅವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಇರಾ ನೇಮು ಪೂಜಾರಿ, ಮೈಸೂರು ಜಿಲ್ಲೆ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ನಟರಾಜ್ ಮೈಸೂರು, ವಿದ್ಯಾ ಸಂಸ್ಥೆಯ ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷ ಸುದರ್ಶನ ಪಡಿಯಾ‌ರ್ ಉಪಸ್ಥಿತರಿದ್ದರು.ಸಮ್ಮೇಳನದಲ್ಲಿ ಸೀತಾಲಕ್ಷ್ಮಿ ವರ್ಮ ಅವರ ಬೊಗಸೆಯೊಳಗಿನ ‘ಚುಟುಕು ಸಾಗರ’ ಕೃತಿ ಅನಾವರಣಗೊಂಡಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರಾಧನಾ ಕಲಾಭವನ ಸಾರಡ್ಕ (ಸಂಸ್ಥೆ), ದೈಹಿಕ ಶಿಕ್ಷಕ ನಿರ್ದೇಶಕ ಶ್ರೀನಿವಾಸ್ ಗೌಡ, ಉಪನ್ಯಾಸಕ ಅಣ್ಣಪ್ಪ ಸಾಸ್ತಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೇಖರ ಪರವ, ಗೋಪಾಲ ಜೋಗಿ, ನಾಟಿ ವೈದ್ಯರಾದ ನಳಿನಿ, ಬಾಲ ಪ್ರತಿಭೆ ರಿಷಿತ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುದಾಳ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಪ್ರಸ್ತಾವಿಸಿದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಮೋಹನ ಗುರ್ಜಿನಡ್ಕ ವಂದಿಸಿದರು. ರಾಧಾಕೃಷ್ಣ ಎರುಂಬು, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳ ಚುಟುಕು ಗೋಷ್ಠಿ ಕಾರ್ಯಕ್ರಮ ನಡೆಯಿತು. ಧೃತಿ ಕಲ್ಲಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಚುಟುಕು ಗೋಷ್ಠಿ ಕಾರ್ಯಕ್ರಮದಲ್ಲಿ ಮೇಘಶ್ರೀ ವಿಟ್ಲ, ಪೂರ್ಣೇಶ್‌ ಅಡ್ಯನಡ್ಕ, ತನ್ವಿತಾ ಅಡ್ಯನಡ್ಕ, ದನಿ ದೇವಸ್ಯ ಮೂಡೂರು, ಹೃಷಿಕೇಶ ದೇವಸ್ಯ, ವೇದಾಂತ್‌ ಶೆಟ್ಟಿ ಕೆಲಿಂಜ, ಸಿಂಚನ್‌ ಶಂಭೂರು, ಅದ್ವೈತ್‌ ಪೆಲತ್ತಡ್ಕ, ಶೀರ್ಷಿತಾ ಕಾರಂತ, ಮನೀಶ್‌ ಕಲ್ಲಡ್ಕ, ಅಖ್ಯಾತ್‌ ರೈ ಕಡೇಶಿವಾಲಯ, ಧನ್ವಿತಾ ಕಾರಂತ, ಯಕ್ಷಿತಾ ವಿಟ್ಲ, ಶ್ರೇಯಾ ವಿಟ್ಲ, ಚಿಂತನಾ ವಿಟ್ಲ, ವೈನಾವಿ ಕೋಟ್ಯಾನ್‌, ದಿಯಾ ಚಂದಳಿಕೆ, ಪ್ರೇಕ್ಷಾ ಶಂಭೂರು, ಅಕ್ಷತಾ ವಿಟ್ಲ, ತೇಜಸ್ವಿನಿ ವಿಟ್ಲ, ತಶ್ವಿ ಶಾಂಭವಿ ಜೋಗಿಬೆಟ್ಟು, ಸ್ಮಿತಾ ಸರಳಾಯ ನೀರ್ಕಜೆ, ಅನಿಲ್‌ ಡಿ ಸೋಜ ದೇಲಂತಬೆಟ್ಟು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಆದರ್ಶ ಚೊಕ್ಕಾಡಿ, ಪ್ರಾಂಶುಪಾಲರು ವಿಠಲ ಪದವಿಪೂರ್ವ ಕಾಲೇಜು ವಿಟ್ಲ, ಶಂಕರ ನಾರಾಯಣ ಪ್ರಸಾದ್‌, ಶಿಕ್ಷಕರು ಅಧ್ಯಕ್ಷರು ಕನ್ನಡ ಸಂಘ ವಿಟ್ಲ, ಉಪಸ್ಥಿತರಿದ್ದರು. ನಾರಾಯಣ ಕುಂಬ್ರ ಸ್ವಾಗತಿಸಿ, ಹಿತೇಶ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ವೈದ್ಯಕೀಯ ಕ್ಷೇತ್ರದ ಡಾ.ವಿಶ್ವನಾಥ ನಾಯಕ್, ಡಾ.ಜಯರಾಮ ವಿಶ್ವನಾಥ, ಸಾಹಿತ್ಯ ಕ್ಷೇತ್ರದ ಸವಿತಾ ಎಸ್.ಭಟ್ ಅಡ್ವಾಯಿ, ಶಿಕ್ಷಣ ಕ್ಷೇತ್ರದ ನಾರಾಯಣ ಪೂಜಾರಿ ಎಸ್.ಕೆ. ಯಕ್ಷಗಾನ ರಂಗದ ಸದಾಶಿವ ಶೆಟ್ಟಿ ಸಿದ್ಧಕಟ್ಟೆ, ಕೃಷಿ ಕ್ಷೇತ್ರದ ಚಿದಾನಂದ ಪೆಲತ್ತಿಂಜ, ವಾಸ್ತು ತಜ್ಞ ಕೃಷ್ಣಪ್ಪ ಆಚಾರ್ಯ, ದೈವ ನರ್ತಕ ರಮೇಶ್ ವಗ್ಗ ಸಾಮಾಜಿಕ ಸೇವಾಕರ್ತ ರಶೀದ್ ವಿಟ್ಲ ಉದ್ಯಮಿ ಚಾರ್ಲ್ಸ್ ಸಿಕ್ವೆರಾ, ನಿವೃತ್ತ ಯೋಧ ದಯಾನಂದ ಗೌಡ ಅವರನ್ನು ಸನ್ಮಾನಿಸಲಾಯಿತು.ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ವರ್ಮ ವಿಟ್ಲ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಜಯರಾಮ ಪಡ್ರೆ ವಂದಿಸಿದರು. ವಿಂಧ್ಯಾ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.ಸಮಾರೋಪ ಕಾರ್ಯಕ್ರಮದ ಮೊದಲು ಮಕ್ಕಳ ಚುಟುಕು ಗೋಷ್ಠಿ ವಿಚಾರ ಸಂಕಿರಣ, ಯಕ್ಷಗಾನ ತಾಳಮದ್ದಳೆ, ಹಿರಿಯರ ಚುಟುಕು ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- Advertisement -

Related news

error: Content is protected !!