Tuesday, September 22, 2026
spot_imgspot_img
spot_imgspot_img

ವಿಟ್ಲ:(ಅ.22) ಮಹಿಳಾ ಭಾವೈಕ್ಯತೆ ಕ್ರೀಡಾಕೂಟದ ಆಮಂತ್ರಣ ಪತ್ರ ಬಿಡುಗಡೆ

- Advertisement -
- Advertisement -

ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ಆಶ್ರಯದಲ್ಲಿ ವಿಟ್ಲ ಪಡ್ನೂರು ಗ್ರಾಮದ ಎಲ್ಲಾ 11 ಅಂಗನವಾಡಿಗಳ ಸ್ತ್ರೀಶಕ್ತಿ ಸಂಘಗಳ ಸದಸ್ಯರನ್ನು, ಆಶಾ ಕಾರ್ಯಕರ್ತೆಯರನ್ನು, ಹಾಗೂ ಸಂಜೀವಿನಿ ಒಕ್ಕೂಟಗಳನ್ನು ಸೇರಿಸಿಕೊಂಡು , ವಿಟ್ಲ ಪಡ್ನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಬು ಇಲ್ಲಿ ತಾರೀಕು 22 10 2018 ಬುಧವಾರದಂದು ನಡೆಯುವ ಮಹಿಳಾ ಭಾವೈಕ್ಯತೆ ಕ್ರೀಡಾಕೂಟದ ಆಮಂತ್ರಣ ಪತ್ರವನ್ನು ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮದ ಸಂಯೋಜಕ ಶ್ರೀ ಬಿ ಸಂದೇಶ್ ಶೆಟ್ಟಿ ಬಿಕ್ನಾಜೆ, ಲಯನ್ಸ್ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್, ಸಂಘದ ಕಾರ್ಯದರ್ಶಿ ದಿನಕರ ಆಳ್ವ, ಸದಸ್ಯರಾದ ಓ ಎ ಕೃಷ್ಣ, ಧರ್ಣಪ್ಪ ಗೌಡ ಬನ, ಮೋಹನ್ ಕಟ್ಟೆ, ರವಿಕುಮಾರ್, ರಾಘವ ಗೌಡ ಬನ ಅರಮನೆ ಮನೆತನದ ಜಯರಾಮ ಬಲ್ಲಾಳ್, ಸಾಮಾಜಿಕ ಕಾರ್ಯಕರ್ತ ಸುರೇಶ್ ಆಚಾರಿ, ಮುಂತಾದವರು ಉಪಸ್ಥಿತರಿದ್ದರು. ಅರ್ಚಕರಾದ ಬನ್ನಿಂತಾಯರು ಕಾರ್ಯಕ್ರಮ ನಿರ್ವಿಪ್ತವಾಗಿ ಸಾಗಲಿ ಎಂದು ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು.

- Advertisement -

Related news

error: Content is protected !!