Tuesday, May 14, 2024
spot_imgspot_img
spot_imgspot_img

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

- Advertisement -G L Acharya panikkar
- Advertisement -

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಂಡಿದೆ.

ಮೇ.24 ರಿಂದ ಜೂನ್ 16 ರವರೆಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಿಗದಿ ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಅಂತಿಮ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದ ಸಚಿವರು ಈಗಾಗಲೇ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಂದಂತಹ ಮಾಹಿತಿಯನ್ನು ಆಧರಿಸಿ, ಇದೀಗ ಮೇ 24 ರಿಂದ ಜೂನ್ 16 ರವರೆಗೆ ನಡೆಸಲು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ ಎಂದರು.

ಮೇ.24- ಇತಿಹಾಸ, ಮೇ.26- ಭೂಗೋಳ ಶಾಸ್ತ್ರ, ಮೇ.31- ಇಂಗ್ಲೀಷ್, ಜೂನ್.2- ರಾಜ್ಯಶಾಸ್ತ್ರ, ಜೂನ್.3-ಜೀವಶಾಸ್ತ್ರ, ಜೂನ್.4- ಅರ್ಥಶಾಸ್ತ್ರ, ಜೂನ್.7- ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಜೂನ್.10- ಸಮಾಜಶಾಸ್ತ್ರ, ರಾಸಾಯನಶಾಸ್ತ್ರ, ಜೂನ್.12- ಸಂಖ್ಯಾಶಾಸ್ತ್ರ, ಜೂನ್.14- ಲೆಕ್ಕಶಾಸ್ತ್ರ, (ಗಣಿತ), ಜೂನ್.16- ಕನ್ನಡ (ಪ್ರಥಮ ಭಾಷೆ) ಪರೀಕ್ಷೆ ನಡೆಯಲಿದೆ.

- Advertisement -

Related news

error: Content is protected !!