Tuesday, April 16, 2024
spot_imgspot_img
spot_imgspot_img

ಪುತ್ತೂರು: ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ; ಶಾಸಕ ಸಂಜೀವ ಮಠಂದೂರು!

- Advertisement -G L Acharya panikkar
- Advertisement -

ಪುತ್ತೂರು: ದೇಶದಲ್ಲಿ ಕೋವಿಡ್ ಎರಡನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಿಸಿದೆ. ಶಾಸಕರ ಕಚೇರಿಯನ್ನು ವಾರ್‌ ರೂಂ ಆಗಿ ಮಾಡುವುದರ ಜತೆಗೆ, ನಗರಸಭೆ, ತಾಲ್ಲೂಕು ಪಂಚಾಯಿತಿಗೆ ವಿಶೇಷ ಜವಾಬ್ದಾರಿ ವಹಿಸಿ ಕೋವಿಡ್ ನಿಯಂತ್ರಣ ಕಾರ್ಯ ಮಾಡಲಾಗುತ್ತಿದೆ. ಪಾಸಿಟಿವ್ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್ ಆರಂಭವಾಗಿ 20 ದಿನಗಳು ಕಳೆದಿವೆ. ನಗರಸಭೆ ಅಧ್ಯಕ್ಷರು ಹಾಗೂ ಪ್ರತಿ ವಾರ್ಡ್ ಸದಸ್ಯರು ವಿಭಿನ್ನ ರೀತಿಯಲ್ಲಿ ಮನೆ-ಮನೆ ಭೇಟಿ ನೀಡಿ ಕೋವಿಡ್‌ ಬಾಧಿತರನ್ನು ಪತ್ತೆ ಹಚ್ಚುವ ಜತೆಗೆ ನಿಮ್ಮ ಜತೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳಿಂದ ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸಹಕಾರ ದೊರೆತಿದೆ ಎಂದರು.

ಕ್ಯಾಂಪ್ಕೊ ವತಿಯಿಂದ ದಾನಿಗಳ ಸಹಕಾರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಆಮ್ಲಜನಕ ಘಟಕ, ರೋಟರಿ ಸಂಸ್ಥೆಗಳಿಂದ ಹಾಸಿಗೆ, ಹಾಸಿಗೆ ಬಟ್ಟೆ, ಔಷಧ, ಎಲೆಕ್ಟ್ರಿಕ್ ಪರಿಕರಗಳು ಮತ್ತಿತರ ಮೂಲ ಸೌಕರ್ಯಗಳು ದೊರೆತಿವೆ. ತಾಲ್ಲೂಕಿನ ಎಲ್ಲ 31 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಪಡೆ ರಚಿಸಿ, ಚುರುಕುಗೊಳಿಸಲಾಗಿದೆ. ಬಲ್ನಾಡಿನ ಮೊರಾರ್ಜಿ ದೇಸಾಯಿ ಶಾಲೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಮಹಾಲಿಂಗೇಶ್ವರ ದೇವಾಲಯದ ಸಭಾಭವನ, ಗಿರಿಜಾ ಕ್ಲಿನಿಕ್ ಅನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ.

ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಇದ್ದರು.

- Advertisement -

Related news

error: Content is protected !!