

ಕುಡ್ತಮುಗೇರು: ಕುದ್ರಿಯಗುತ್ತು ತರವಾಡು ಮನೆ, ಕುಡ್ತಮುಗೇರ್ ಲ್ಲಿ ಏಪ್ರಿಲ್ 16ರಿಂದ 17ರವರೆಗೆ ಕಾಲವಾಧಿ ನೇಮೋತ್ಸವ ಕಾರ್ಯಕ್ರಮ ಜರುಗಲಿವೆ.




ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ, ಶ್ರೀ ಸದಾಶಿವ, ಶ್ರೀ ವಿಷ್ಣುಮೂರ್ತಿ ಹಾಗೂ ಕುಲದೇವತೆಗಳ ಅನುಗ್ರಹದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಣಪತಿ ಹೋಮ, ನಾಗತಂಬಿಲ, ನವಕ ಕಲಶಾಭಿಷೇಕ ಸೇರಿದಂತೆ ಜುಮಾದಿ-ಬಂಟ ದೈವಗಳ ತಂಬಿಲ ಸೇವೆ ಮತ್ತು ವಿವಿಧ ದೈವಗಳ ಕಾಲಾವಧಿ ನೇಮೋತ್ಸವಗಳು ನಡೆಯಲಿವೆ.
ಏಪ್ರಿಲ್ 16ರಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ನಾಗದೇವತೆಗಳ ಸಾನಿಧ್ಯದಲ್ಲಿ ತಂಬಿಲ ಸೇವೆ, ನವಕ ಕಲಶಾಭಿಷೇಕ, ಮುಡಿಪು ಶುದ್ಧ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಮಂತ್ರದೇವತೆ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಧರ್ಮದೈವ ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವಗಳು ನಡೆಯಲಿದೆ.
ಏಪ್ರಿಲ್ 17ರಂದು ಬೆಳಗ್ಗಿನ ಜಾವ ಗುಳಿಗ ದೈವದ ನೇಮೋತ್ಸವ, ನಂತರ ಭಂಡಾರ ಏರಿಸುವುದು, ಮಧ್ಯಾಹ್ನ ಅಗೇಲಿನ ಕೋಳಿ ಬಂಟ ಮತ್ತು ರಾತ್ರಿ ಕುರಿತಂಬಿಲ ಹಾಗೂ ಅಗೇಲು ಸೇವೆಗಳೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಈ ದೈವೀ ಆಚರಣೆಯಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆಯಲು ಕುದ್ರಿಯಗುತ್ತು ತರವಾಡಿನ ಅಧ್ಯಕ್ಷ ರವೀಂದ್ರ ಶೆಟ್ಟಿ ಹಾಗೂ ಕುಟುಂಬಸ್ಥರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.








