Wednesday, April 24, 2024
spot_imgspot_img
spot_imgspot_img

ರಫೇಲ್‌ ಸೇರ್ಪಡೆಯನ್ನು ಸ್ವಾಗತಿಸಿದ ಎಂ.ಎಸ್‌. ಧೋನಿ ಟ್ವೀಟ್.

- Advertisement -G L Acharya panikkar
- Advertisement -

ದುಬಾೖ: ಭಾರತೀಯ ವಾಯುಪಡೆಗೆ ಗುರುವಾರ 5 ರಫೇಲ್‌ ಯುದ್ಧ ವಿಮಾನಗಳು ಸೇರ್ಪಡೆಯಾದವು. ಈ ವೇಳೆ ಮಹೇಂದ್ರಸಿಂಗ್ ಧೋನಿ ವಿಶೇಷ ಟ್ವೀಟ್‌ ಮಾಡಿದ್ದಾರೆ.

ಗುರುವಾರ ಅಂಬಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರಾನ್ಸ್‌ ನಿರ್ಮಿತ ಯುದ್ಧವಿಮಾನಗಳನ್ನು ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಸೇನೆಯಲ್ಲಿ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆ ಪಡೆದಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ರಫೇಲ್‌ ವಿಮಾನಗಳು ಸೇನೆಯನ್ನು ಕೂಡಿಕೊಳ್ಳುತ್ತಿದ್ದಂತೆ ಒಂದು ಟ್ವೀಟ್‌ ಮಾಡಿದರು. “ವಿಶ್ವದ ಶ್ರೇಷ್ಠ ಯುದ್ಧ ವಿಮಾನಗಳು, ವಿಶ್ವದ ಶ್ರೇಷ್ಠ ಪೈಲಟ್‌ಗಳನ್ನು ಹೊಂದಿವೆ. ನಮ್ಮ ಪೈಲಟ್‌ಗಳ ಕೈಯಲ್ಲಿ ಈ ಯುದ್ಧ ವಿಮಾನಗಳು ಇನ್ನಷ್ಟು ಮಾರಕವಾಗಲಿವೆ,ಮತ್ತು ಆಯುಧಗಳಾಗಿವೆ ಎಂದು ಧೋನಿ ಹೇಳಿದರು.

ರಫೇಲ್‌ಗಳನ್ನು ಸೇರ್ಪಡೆ ಮಾಡಿಕೊಂಡ 17 ಸ್ಕ್ವಾಡ್ರನ್ (ಗೋಲ್ಡನ್ ಆ್ಯರೋಸ್) ದಳಕ್ಕೆ ಅಭಿನಂದನೆಗಳು. ಇನ್ನು ಮುಂದೆ ಈ ಯೋಧರ ದಿಟ್ಟತನ ಮತ್ತಷ್ಟು ಪ್ರಜ್ವಲಿಸಲಿದೆ. ಎದುರಾಳಿಗಳಿಗೆ ಇವರು ಸಿಂಹಸ್ವಪ್ನರಾಗಲಿದ್ದಾರೆ’ ಎಂದು ಬರೆದಿದ್ದಾರೆ.

- Advertisement -

Related news

error: Content is protected !!