Monday, March 8, 2021

ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ ರೈತರು

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರೋ ಟ್ರ್ಯಾಕ್ಟರ್​​ ರ್‍ಯಾಲಿ ಘರ್ಷಣೆಗೆ ಸಾಕ್ಷಿಯಾಗಿದೆ. ದೆಹಲಿಯ ಹೃದಯಭಾಗದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಸಾವಿರಾರು ರೈತರು ಇದೀಗ ಕೆಂಪು ಕೋಟೆಯನ್ನ ಪ್ರವೇಶಿಸಿದ್ದಾರೆ.

ತ್ರಿವರ್ಣ ಧ್ವಜವುಳ್ಳ 20ಕ್ಕೂ ಹೆಚ್ಚು ಟ್ರ್ಯಾಕ್ಟರ್​​ಗಳು ಕೆಂಪು ಕೋಟೆಯೊಳಗೆ ಬಂದಿವೆ. ರೈತರು ಘೋಷಣೆಗಳನ್ನ ಕೂಗುತ್ತಾ ಪ್ರತಿಭಟಿಸುತ್ತಿದ್ದಾರೆ. ಈ ವೇಳೆ ರೈತರು ಧ್ವಜಗಳನ್ನ ಪ್ರದರ್ಶಿಸಿದರು. ಅಲ್ಲದೆ ರೈತರೊಬ್ಬರು ಅಲ್ಲಿದ್ದ ಕಂಬವನ್ನೇರಿ ತಮ್ಮ ಸಂಘಟನೆಯ ಧ್ವಜವನ್ನ ಹಾರಿಸಿದ್ದಾರೆ.

ಇಂದು ಗಣರಾಜ್ಯೋತ್ಸವದ ಪರೇಡ್​ ಮುಗಿದ ಬಳಿಕ 12 ಗಂಟೆಯಿಂದ 5 ಗಂಟೆವರೆಗೆ ಱಲಿ ನಡೆಸಲು ದೆಹಲಿ ಪೊಲೀಸರು ರೈತರಿಗೆ ಷರತ್ತುಬದ್ಧ ಅನುಮತಿ ನೀಡಿದ್ದರು. ಆದ್ರೆ ಕೆಲವು ರೈತರು ನಿಗದಿತ ಸಮಯಕ್ಕೂ ಮುನ್ನವೇ ರ್‍ಯಾಲಿ ಆರಂಭಿಸಿ, ದೆಹಲಿ ಪ್ರದೇಶಿಸಲು ಪೊಲೀಸರ ಬ್ಯಾರಿಕೇಡ್​​ಗಳನ್ನ ಉರುಳಿಸಿ ಮುಂದೆ ಸಾಗಿದ್ರು.

ಅಲ್ಲದೆ ದೆಹಲಿ ಐಟಿಓದಲ್ಲಿ ಬಸ್​​ವೊಂದನ್ನ ಧ್ವಂಸ ಮಾಡಿದ್ದಾರೆ. ಮೊದಲೇ ನಿಗದಿಯಾಗಿದ್ದ ರೂಟ್​ ಮ್ಯಾಪ್​ ಉಲ್ಲಂಘಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಘರ್ಷಣೆ ವೇಳೆ ಹಲವಾರು ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

MOST POPULAR

HOT NEWS

Related news

error: Content is protected !!