

ವೈದ್ಯ ದಂಪತಿಗಳು ನಾಲ್ವರನ್ನು ಮನೆ ಕೆಲಸಕ್ಕೆಂದು ಇಟ್ಟುಕೊಂಡಿದ್ದರು. ಅದ್ರಲ್ಲಿ ಒಬ್ಬಾಕೆ ಖತರ್ನಾಕ್..! ವರಮಹಾಲಕ್ಷ್ಮೀ ಹಬ್ಬದಂದು ಚಿನ್ನ ತೆಗೆಯಲು ಹೋದಾಗ ಮನೆ ಒಡತಿ ದಂಗಾಗಿದ್ದಾಳೆ. 12 ಲಕ್ಷ ರೂ ಮೌಲ್ಯದ ಚಿನ್ನವನ್ನು ಮನೆ ಕೆಲಸದಾಕೆ ಎಗರಿಸಿದ ವಿಷಯ ಬೆಳಕಿಗೆ ಬಂದಿದೆ
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವೈದ್ಯ ದಂಪತಿಗಳು ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಚಿನ್ನ ತೆಗೆಯಲು ಹೋದಾಗ ಚಿನ್ನ ಕಳ್ಳತನವಾಗಿದ್ದರ ಕೃತ್ಯ ಬಯಲಾಗಿದೆ. ಆಗ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಕಷ್ಟು ಭದ್ರತೆ ಇರುವ ಸ್ಥಳದಲ್ಲಿ ವೈದ್ಯ ದಂಪತಿಗಳು ವಾಸವಿದ್ದುದರಿಂದ ಮನೆಯ ಕೆಲಸದವರ ಮೇಲೆ ಅನುಮಾನ ಹೆಚ್ಚಾಗಿದೆ. ತನಿಖೆ ಕೈಗೊಂಡ ನಂತರ ಮನೆ ಕೆಲಸದಾಕೆ ಅಮ್ಮು ಎಂಬವಳ ಕೈಚಳಕ ಎಂದು ತಿಳಿದಿದೆ.

ವೈದ್ಯರ ಮನೆಯಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ಅಮ್ಮು, ಮನೆಯಲ್ಲಿದ್ದ ಚಿನ್ನವನ್ನು ಹಂತಹಂತವಾಗಿ ಕದ್ದೊಯ್ದಿದ್ದಳು. ಮನೆಯಲ್ಲಿ ನಾಲ್ವರು ಕೆಲಸಗಾರರಿದ್ದುದರಿಂದ ಅನುಮಾನ ಬಾರದಂತೆ ಕೃತ್ಯ ಎಸಗಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿ ತಳಿಂದ ಸುಮಾರು 12 ಲಕ್ಷ ರೂ ಮೌಲ್ಯದ 235 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

