Saturday, May 18, 2024
spot_imgspot_img
spot_imgspot_img

*ಅಂತರ್ರಾಷ್ಟ್ರೀಯ ಜಿನಸಮ್ಮಿಲನ 2020 ರ ಪ್ರಯುಕ್ತ ಆಯೋಜಿಸಿದ್ದ ಸ್ವರಚಿತ ಕವನ ಸ್ಪರ್ಧೆಯಲ್ಲಿ ಸಮ್ಯಕ್ತ್ ಜೈನ್ ಪ್ರಥಮ*

- Advertisement -G L Acharya panikkar
- Advertisement -

ಕರೋನಾ ಕಾಲಘಟ್ಟದಲ್ಲಿ ನಡೆಯುತ್ತಿರುವ ಹಲವಾರು ಕಾರ್ಯಕ್ರಮಗಳು ಧಾರ್ಮಿಕ ಮೌಲ್ಯವನ್ನು ಜನರಲ್ಲಿ ಉತ್ಕೃಷ್ಟಗೊಳಿಸುತ್ತಿದ್ದು ಇದಕ್ಕೊಂದು ಸೂಕ್ತ ಮಾದರಿಯಾಗಿ ಹೊರಹೊಮ್ಮಿದೆ ಭಾರತೀಯ ಜೈನ್ ಮಿಲನ್ ವಲಯ 8 , ಇದರ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಫೇಸ್‌ಬುಕ್‌ ಫೇಜ್ ಜಂಟಿಯಾಗಿ ನಡೆಸಿದ ಜಿನಸಮ್ಮಿಲನ ಕಾರ್ಯಕ್ರಮ.

ಅಂತರ್ರಾಷ್ಟ್ರೀಯ ಜಿನಸಮ್ಮಿಲನ 2020 ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ “ಜೈನ ಧರ್ಮ ” ವಿಷಯಾಧಾರಿತ ಸ್ವರಚಿತ ಕವನ ವಾಚನ ಸ್ಪರ್ಧೆ ನಡೆಸಿದ್ದು , ಇದರಲ್ಲಿ ಕಡಬ ತಾಲೂಕು ನೂಜಿಬಾಳ್ತಿಲ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಹಾಗು ಮಂಜುಳಾ ರವರ ಸುಪುತ್ರ , ಯುವ ಪ್ರತಿಭೆ ಸಮ್ಯಕ್ತ್ ಜೈನ್ ರವರು ಪ್ರಥಮ

ಸ್ಥಾನ ಪಡೆದಿದ್ದಾರೆ .

ಮೂರು ಕವನ ಸಂಕಲನವನ್ನು ಬರೆದು- ಬಿಡುಗಡೆಗೊಳಿಸಿ , ಸಾರಸ್ವತ ಲೋಕದಲ್ಲಿ ತನ್ನದೇ ಸಾಧನೆಗಳ ಮೂಲಕ ಹೆಚ್ಚೆಯನ್ನಿಡುತ್ತಾ ಯುವ ಸಾಹಿತಿ , ವಾಗ್ಮಿ , ಅಭಿನಯಕಾರ ,ನಿರೂಪಕ , ನಾಟಕರಚನೆಗಾರರಾಗಿ ಗುರುತಿಸಿಕೊಂಡಿದ್ದು ,ಪ್ರಸ್ತುತ ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.

- Advertisement -

Related news

error: Content is protected !!