


ಬಂಟ್ವಾಳ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಪುಲಮರ್ದ್ ವೈದ್ಯಾಲಯ ಏಮಾಜೆ ಇಲ್ಲಿ ಫೆಬ್ರವರಿ 25, 2026ರ ಬುಧವಾರ ಸಂಜೆ 6 ಗಂಟೆಗೆ ಶ್ರೀ ಸ್ವಾಮಿ ಧನ್ವಂತರಿ ಕೊರಗಜ್ಜ ದೈವದ ನರ್ತನೋತ್ಸವ ಹಾಗೂ ಅಗೇಲು ಸೇವೆ ಸಮರ್ಪಣೆ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 5 ಗಂಟೆಯಿಂದ ಎಲ್.ಕೆ. ಧರಣ್ ಮಾಣಿ ಮತ್ತು ಬಳಗದವರಿಂದ ಭಕ್ತಿ ಗಾನಮೃತ ಕಾರ್ಯಕ್ರಮ ನಡೆಯಲಿದ್ದು, ಭಕ್ತರಿಗೆ ಭಕ್ತಿರಸಾಮೃತದ ಸವಿನೆನಪು ನೀಡಲಿದೆ.ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೈವದ ಗಂಧಪ್ರಸಾದವನ್ನು ಸ್ವೀಕರಿಸುವಂತೆ ವೇದಾವತಿ ಹಾಗೂ ಪೂವಪ್ಪ ಏಮಾಜೆ ಅವರು ಭಕ್ತರಲ್ಲಿ ವಿನಂತಿಸಿದ್ದಾರೆ.
ಸೇವೆ ಹಾಗೂ ಸೂಚನೆಗಳು:
ಅಗೇಲು ಸೇವೆಯ ಬಾಬು: ₹500/-ಅಗೇಲು ಸೇವೆ ಸಮರ್ಪಿಸಲು ಇಚ್ಛಿಸುವ ಭಕ್ತರು ಫೆ.24, 2026ರೊಳಗೆ ತಿಳಿಸಬೇಕು.ಬಾಳೆಗಿಡ, ಅಡಿಕೆ, ಪಿಂಗಾರ ಹೂ ಸೇರಿದಂತೆ ಇತರೆ ವಸ್ತುಗಳನ್ನು ಸೇವಾರೂಪದಲ್ಲಿ ಸ್ವೀಕರಿಸಲಾಗುವುದು.
ಭಕ್ತರು ತನು-ಮನ-ಧನಗಳಿಂದ ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 9902204767
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿದ್ದಾರೆ.









