ಮೈಸೂರು: ಎಸ್.ಎಲ್.ವಿ ಬುಕ್ ಹೌಸ್ ನ 4ನೇ ಮಳಿಗೆ ಮೈಸೂರಿನ ಚಾಮರಾಜ ನಗರದಲ್ಲಿ ಫೆ.19 ರಂದು ಶುಭಾರಂಭಗೊಂಡಿತು. ಎಸ್.ಎಲ್.ವಿ ಬುಕ್ ಹೌಸ್ ನ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಯವರ ತಾಯಿ ಶ್ರೀಮತಿ ಸುಂದರಿ ರಾಮದಾಸ ರವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೋಲ್ಪೆ ಗುತ್ತು ರಾಜರಾಮ ಶೆಟ್ಟಿ,ಎಮ್ ಸಿ ಎಸ್ ಸ್ಕೂಲ್ ಹೆಡ್ ಮಾಸ್ಟರ್ ಮಹಾದೇವಸ್ವಾಮಿ, ವಿಶಾಲ್ ಶರ್ಮಾ,ಮದನ ಗೌಡ ಮುಂದ್ರ ಬೈಲು,ಶ್ರೀಮತಿ ಯಶೋಧಾ ರಘುರಾಮ್ ದಾಸ್, ರಾಜೀವಿ ಸುರೇಶ್ ದಾಸ್,ದೆಹಲಿ ಚಿಲ್ಡ್ರನ್ ಚೋಯ್ಸ್ ಸಿಇಓ ವಿಫುಲ್ ಮತ್ತು ಸಂಜಯ್,ರಾಮದಾಸ್ ಶೆಟ್ಟಿ, ವನಿತಾ ಭಟ್,ಎಸ್. ಎಲ್. ವಿ ಗ್ರೂಪ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀಮತಿ ಹೇಮಾವತಿ ದಿವಾಕರ ದಾಸ್ ರವರು ಅತಿಥಿಗಳನ್ನು ಸ್ವಾಗತಿಸಿದರು.


ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ದಿವಾಕರ್ ದಾಸ್ ರವರ ಎಸ್ ಎಲ್ ವಿ ಸಂಸ್ಥೆಯು ಈಗಾಗಲೇ ಮಂಗಳೂರಿನ ಬಿಜೈ ಮತ್ತು ಕೊಡಿಯಾಲ್ ಬೈಲ್ ನಲ್ಲಿ ಎಸ್ ಎಲ್ ವಿ ಬುಕ್ಸ್ ಮಳಿಗೆ ಮತ್ತು ಮೈಸೂರಿನ ವಿಜಯ ನಗರದಲ್ಲಿ ಅತಿದೊಡ್ಡ ಬುಕ್ಸ್ ಶೋರೂಮ್ ಹೊಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.












