Friday, April 26, 2024
spot_imgspot_img
spot_imgspot_img

ಸುಳ್ಯ: ಕ್ಲಾಸಿಕ್ ಅರಂತೋಡು ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ಸುಳ್ಯ : ಕ್ಲಾಸಿಕ್ ಅರಂತೋಡು ಇದರ ಅಶ್ರಯದಲ್ಲಿ ಪ್ರಥಮ ವರ್ಷದ 60 ಕೆಜಿ ವಿಭಾಗದ ಪುರುಷರ ಸೂರ್ಯ ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಮಾ.21 ರಂದು ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮೊಗೇರ ಸಂಘದ ಗೌರವಧ್ಯಕ್ಷರಾದ ಡಾ.ಬಿ.ರಘು ಮಾತನಾಡಿ ಕ್ರೀಡೆ ಗಳು ಬೇರೆ ದೇಶದಿಂದ ಅಮದು ಮಾಡಿಕೊಂಡಂತಹ ಕ್ರೀಡೆಯಾಗಿದೆ ಕಬಡ್ಡಿ. ಪಂದ್ಯಾಟಕ್ಕೆ ನಮ್ಮ ದೇಶದಲ್ಲಿ ಮುಖ್ಯವಾಗಿ ಸರಕಾರವು ಪ್ರಾಮುಖ್ಯತೆ ಕೊಡುತ್ತಾ ಇದೆ. ಕ್ರೀಡೆ ಇವತ್ತು ಸೌಹಾರ್ದತೆ ಮತ್ತು ಶಾಂತಿಯಾ ಸಂಕೇತವಾಗಿದೆ. ಕ್ರೀಡೆಯಿಂದ ಇವತ್ತು ಒಳ್ಳೆಯ ಭಾಂದವ್ಯ ಬೆಳೆಯುತ್ತದೆ. ಅದೇ ರೀತಿ ಕ್ರೀಡೆಗೆ ಶಕ್ತಿ ಮತ್ತು ಯುಕ್ತಿ ಎರಡೂ ಬೇಕಾಗುತ್ತದೆ. ಆದರಿಂದ ಕಬಡ್ಡಿ ಆಡಲು ಶಕ್ತಿ ಇದ್ದರೆ ಮಾತ್ರ ಕಬಡ್ಡಿ ಆಡಲು ಸಾಧ್ಯ ಎಂದು ಹೇಳಿದರು.

ಪ್ರಥಮ ಸ್ಥಾನ ಚಾಮುಂಡೇಶ್ವರಿ ಅಡ್ಯಡ್ಕ, ದ್ವಿತೀಯ ಸ್ಥಾನ ಪ್ರಮಯ ಚಿಕನ್ ಅಡ್ಯಡ್ಕ, ತೃತೀಯ ಸ್ಥಾನ ಕ್ಲಾಸಿಕ್ ಅರಂತೋಡು, ಚತುರ್ಥ ಸ್ಥಾನ ಶ್ರೀ ವಿಷ್ಣು ಕಡೆಪಾಲ ಪಡೆದುಕೊಂಡಿತು.

ಉತ್ತಮ ಹಿಡಿತಗಾರ ಜೀವನ್, ಉತ್ತಮ ರೈಡರ್ ಸಂದೇಶ್, ಉತ್ತಮ ಆಲ್ ರೌಂಡರ್ ಪ್ರದೀಪ್ ರವರು ಪ್ರಶಸ್ತಿ ಪಡೆದರು. ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕುಸುಮಾಧರ ಅಡ್ಕಬಳೆ, ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಅರಂತೋಡು ವೇದಿಕೆಯಲ್ಲಿ ಇದ್ದರು. ಮಂಜುನಾಥ ಕಾಟೂರು, ಚೇತನ ಕೊಡೆಂಕೇರಿ, ರವಿ, ರಾಜೇಂದ್ರ, ನವೀನ ಮುಂತಾದವರು ಉಪಸ್ಥಿತರಿದ್ದರು. ಸಾಗರ್ ಬೆಳ್ಳಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!