Wednesday, May 1, 2024
spot_imgspot_img
spot_imgspot_img

ಚಕ್ರಬಡ್ಡಿ ಮನ್ನಾ-ಸುಪ್ರೀಂ ಕೋರ್ಟ್ ಆದೇಶ!!

- Advertisement -G L Acharya panikkar
- Advertisement -

ನವದೆಹಲಿ: ಕೊರೋನಾದಿಂದ ಕಂಗೆಟ್ಟು ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು, ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ.

ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ ಮನ್ನಾ ಘೋಷಿಸಿದ್ದು, 2 ಕೋಟಿಯವರೆಗಿನ ಸಾಲಕ್ಕೆ ಈ ಮನ್ನಾ ಅನ್ವಯವಾಗಲಿದೆ. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 6,500 ಕೋಟಿ ರೂಪಾಯಿ ಹೊರೆಯಾಗಲಿದೆ.

ಕೊರೋನಾ ಲಾಕ್ ಡೌನ್ ಅವಧಿಯ ಮಾರ್ಚ್ 1 ರಿಂದ ಅಗಸ್ಟ್ 31 ರ ವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಗೆ ಅವಧಿಗೆ ಅನ್ವಯಿಸುವಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಯೋಜನೆಯ ಪ್ರಯೋಜನ ಪಡೆದವರಿಗೆ ಮತ್ತು ಪಡೆಯದವರಿಗೂ ಈ ಘೋಷಣೆ ಅನ್ವಯವಾಗಲಿದೆ.

ಎಂ.ಎಸ್.ಎಂ.ಇ ಲೋನ್, ಶಿಕ್ಷಣ ಸಾಲ, ಗೃಹ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ,ವೈಯಕ್ತಿಕ ಸಾಲ,ಉಪಭೋಗದ ಸಾಲ ಪಡೆದವರಿಗೆ ಈ ಚಕ್ರಬಡ್ಡಿ ಮನ್ನಾ ಯೋಜನೆ ಅನ್ವಯವಾಗಲಿದೆ.

ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ಚಕ್ರಬಡ್ಡಿ ಮನ್ನಾ ಆದೇಶವನ್ನು ಹೊರಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಇದರಿಂದ ವಿವಿಧ ಸಾಲಬಾಧೆಯಿಂದ ಕಂಗಾಲಾಗಿರುವ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

- Advertisement -

Related news

error: Content is protected !!