Tuesday, September 28, 2021
spot_imgspot_img
spot_imgspot_img

ದೆಹಲಿ ಪೊಲೀಸರಿಂದ 6 ಮಂದಿ ಶಂಕಿತ ಉಗ್ರರ ಬಂಧನ; ಇಬ್ಬರಿಗೆ ಪಾಕ್ ನಂಟು

- Advertisement -
- Advertisement -

ನವದೆಹಲಿ: ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮಹಾ ಕಾರ್ಯಾಚರಣೆಯೊಂದರಲ್ಲಿ 6 ಮಂದಿ ಉಗ್ರರನ್ನು ಬಂಧಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸ್ಪೆಷಲ್ ಸೆಲ್ ಅಧಿಕಾರಿಗಳು ನಾಲ್ವರು ಉಗ್ರರ ಫೋಟೋಗಳನ್ನ ರಿಲೀಸ್ ಮಾಡಿದೆ. ಜೀಷನ್ ಕಮಾರ್, ಒಸಾಮಾ, ಜನ್ ಮೊಹಮ್ಮದ್ ಅಲಿ ಶೇಖ್, ಮೊಹಮ್ಮದ್ ಅಬುಬಕ್ಕರ್ ಬಂಧಿತ ಉಗ್ರರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ಪೆಷಲ್ ಸೆಲ್ ಅಧಿಕಾರಿಗಳು, ಕೋಟಾದಲ್ಲಿ ಸಮೀರ್ ಹೆಸರಿನ ಓರ್ವ ಉಗ್ರನನ್ನು ಬಂಧಿಸಿದ್ದೇವೆ. ಇಬ್ಬರನ್ನು ದೆಹಲಿಯಲ್ಲಿ ಮತ್ತು ಮೂವರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದೇವೆ ಎಂದಿದ್ದಾರೆ. ಬಂಧತರಲ್ಲಿ ಇಬ್ಬರನ್ನು ಮುಸ್ಕಟ್ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ದು ಸ್ಫೋಟಕಗಳು, ಬಂದೂಕುಗಳು ಮತ್ತು ಎ.ಕೆ. 47 ಬಳಕೆಗೆ ಸಂಬಂಧಿಸಿದಂತೆ 15 ದಿನಗಳ ಕಾಲ ಟ್ರೈನಿಂಗ್ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಬಂಧಿತರು ತಮ್ಮ ಗುಂಪಿನಲ್ಲಿ 14-15 ಮಂದಿ ಬಾಂಗ್ಲಾ ಮಾತನಾಡುವವರೂ ಇದ್ದಾರೆಂದು ಬಾಯ್ಬಿಟ್ಟಿದ್ದಾರೆ. ಅವರಿಗೂ ಸಹ ಟ್ರೈನಿಂಗ್ ನೀಡಿರಬಹುದು. ಈ ಉಗ್ರರು ಬಾರ್ಡರ್ ಸಮೀಪದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ.

driving
- Advertisement -
- Advertisement -

MOST POPULAR

HOT NEWS

Related news

error: Content is protected !!