Thursday, September 10, 2026
spot_imgspot_img
spot_imgspot_img

ಕೇರಳಂ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ

- Advertisement -
- Advertisement -

ತಿರುನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರೂ ಆಗಿರುವ ತಿರುವನಂಚೂರು ರಾಧಾಕೃಷ್ಣನ್ ಶುಕ್ರವಾರ(ಇಂದು) ಕೇರಳಂ 16ನೇ ವಿಧಾನಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಮತ ಚಲಾಯಿಸದ ಕಾರಣ ರಾಧಾಕೃಷ್ಣನ್ 101 ಮತಗಳನ್ನು ಪಡೆದು ಸ್ಪೀಕರ್‌ ಸ್ಥಾನಕ್ಕೆ ಆಯ್ಕೆಯಾದರು.

140 ಸದಸ್ಯರಲ್ಲಿ ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಚುನಾವಣಾ ಅಧಿಕಾರಿ ಆಗಿದ್ದ ಕಾರಣ ಮತದಾನದಿಂದ ದೂರ ಉಳಿದಿದ್ದರು. ಚಲಾವಣೆಯಾದ 139 ಮತಗಳಲ್ಲಿ, ಯುಡಿಎಫ್‌ನಿಂದ ಕಣಕ್ಕಿಳಿದ ರಾಧಾಕೃಷ್ಣನ್ 101 ಮತಗಳನ್ನು ಪಡೆದು ಸ್ಪೀಕರ್‌ ಆಗಿ ಆಯ್ಕೆಯಾದರು. ಎಲ್‌ಡಿಎಫ್‌ನ ಎಸಿ ಮೊಯ್ದೀನ್ 35 ಮತಗಳನ್ನು ಪಡೆದರೆ, ಬಿಜೆಪಿಯ ಬಿಬಿ ಗೋಪಕುಮಾರ್ 3 ಮತಗಳಿಂದ ನಿರಾಸೆ ಅನುಭವಿಸಿದರು.

76 ವರ್ಷದ ರಾಧಾಕೃಷ್ಣನ್ 1991 ರಿಂದ ವಿಧಾನಸಭೆಯ ಸದಸ್ಯರಾಗಿದ್ದು, 8 ಬಾರಿ ಶಾಸಕರಾಗಿರುವ ಅವರು 2011-2016 ರಲ್ಲಿ ಉಮ್ಮನ್ ಚಾಂಡಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಸಚಿವಾಲಯದ ಉಳಿದ ಅವಧಿಗೆ ಅರಣ್ಯ, ಸಾರಿಗೆ, ಕ್ರೀಡೆ, ಸಿನಿಮಾ ಮತ್ತು ಪರಿಸರ ಖಾತೆಗಳನ್ನ ನಿರ್ವಹಿಸಿದ್ದಾರೆ.

2026 ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾಯಂ ಕ್ಷೇತ್ರದಿಂದ ಸ್ಪರ್ಧಿಸಿ, ಸುಮಾರು 36,000 ಮತಗಳ ಅಂತರದಿಂದ ಜಯಗಳಿಸಿದ್ದರು.

- Advertisement -

Related news

error: Content is protected !!