Tuesday, July 21, 2026
spot_imgspot_img
spot_imgspot_img

ಬಳ್ಳಾರಿಯಲ್ಲಿ ಪ್ಯಾರಾಚೂಟ್‌ ತರಬೇತಿ ವೇಳೆ 50 ಅಡಿ ಎತ್ತರದಿಂದ ಬಿದ್ದು ಇಬ್ಬರು ಸೈನಿಕರಿಗೆ ಗಾಯ

- Advertisement -
- Advertisement -

ಬಳ್ಳಾರಿ: ಸೈನಿಕರ ಪ್ಯಾರಾಚೂಟ್‌ ತರಬೇತಿ ವೇಳೆ ಅವಘಡ ಸಂಭವಿಸಿದ್ದು, 50 ಅಡಿ ಎತ್ತರದಿಂದ ಬಿದ್ದು ಇಬ್ಬರು ಸೈನಿಕರು ಗಾಯಗೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಹೊರವಲಯದ ಪಿ.ಡಿ ಹಳ್ಳಿ ಭಾಗದಲ್ಲಿ ಸೈನಿಕರಿಗೆ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಅವಘಡ ನಡೆದಿದೆ. ತರಬೇತಿ ನಿರತ ಸೇನಾ ಸಿಬ್ಬಂದಿ ಚಿನ್ನರಾಜ್ (25) ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಇಬ್ಬರಿಗೂ ಕಾಲಿನ ಮೂಳೆ ಮುರಿದು ಗಂಭೀರ ಗಾಯವಾಗಿದೆ.

ಇಂದು (ಏ.18) ಬೆಳಿಗ್ಗೆ 417 ಸೈನಿಕರಿಂದ ಪ್ಯಾರಾಚೂಟ್ ತರಬೇತಿ ನಡೆಯುತ್ತಿತ್ತು. ತರಬೇತಿ ವೇಳೆ ಪ್ಯಾರಾಚೂಟ್ ನಿಂದ ಇಬ್ಬರು ಪ್ಯಾರಾಚೂಟ್ ತರಬೇತಿ ಸೈನಿಕರು ಕೆಳಕ್ಕೆ ಬಿದ್ದಿದ್ದಾರೆ. ಆರಂಭದಲ್ಲಿ ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಬಳಿಕ ಹೆಚ್ಚಿನ ಚಿಕಿತ್ಸೆಗೆ ಐಟಿಐ ಕಾಲೇಜು ಮೈದಾನದಿಂದ ಬೆಂಗಳೂರಿಗೆ ಸೈನಿಕರನ್ನು ಏರ್‌ಲಿಫ್ಟ್‌ ಮಾಡಲಾಯಿತು ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!