Friday, July 24, 2026
spot_imgspot_img
spot_imgspot_img

ಉಡುಪಿ: ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ ಉಡುಪಿಯ ವಿದುಷಿ ದೀಕ್ಷಾ

- Advertisement -
- Advertisement -

ಉಡುಪಿ: 216 ಗಂಟೆಗಳ ಕಾಲ ಭರತನಾಟ್ಯ ಮಾಡುವ ಗುರಿಯೊಂದಿಗೆ ಆ.21 ರಂದು ನೃತ್ಯ ಆರಂಭ ಮಾಡಿದ್ದ ಉಡುಪಿಯ ವಿದುಷಿ ದೀಕ್ಷಾ ಅವರ ಹೆಸರು ಸದ್ಯ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ನಲ್ಲಿ ಅಚ್ಚಾಗಿದೆ.

ಕೆಲ ದಿನಗಳ ಹಿಂದಷ್ಟೇ ಭರತನಾಟ್ಯ 170 ಗಂಟೆಗಳ ಕಾಲ ಭರತನಾಟ್ಯ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದ ಮಂಗಳೂರಿನ ರೆಮೊನಾ ಪಿರೇರಾ ಅವರ ದಾಖಲೆ ಮುರಿದು, ಹೊಸ ದಾಖಲೆ ಬರೆದಿದ್ದಾರೆ.ದೀಕ್ಷಾ ಅವರು 170 ಗಂಟೆಗಳ ನಾಟ್ಯ ಪ್ರದರ್ಶನ ಮುಗಿಸುತ್ತಿದ್ದಂತೆಯೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಮುಖ್ಯಸ್ಥ ಮನೀಶ್ ಬಿಷ್ಟೋಯಿ ಅವರು ರೆಕಾರ್ಡ್‌ ಘೋಷಣೆ ಮಾಡಿದ್ದಾರೆ. ಸಾಧಕಿ ದೀಕ್ಷಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

- Advertisement -

Related news

error: Content is protected !!