- Advertisement -
- Advertisement -


ಉಳ್ಳಾಲ: ಸಮೀಪದ ತೊಕ್ಕೊಟ್ಟುವಿನಲ್ಲಿ ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಸಲ್ಮಾನ್ ಫಾರಿಶ್ (20) ಎಂದು ಗುರುತಿಸಲಾಗಿದೆ.ಅವರು ಮೂಲತಃ ಪಜೀರು ಬೆಂಗೋಡಿ ಪದವಿನವರಾಗಿದ್ದು, ಪ್ರಸ್ತುತ ಮಂಗಳೂರುನಲ್ಲಿ ವಾಸವಾಗಿದ್ದರು.
ತೊಕ್ಕೊಟ್ಟುವಿನ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ ವಸ್ತ್ರಮಳಿಗೆಯನ್ನು ಇದೇ ಶುಕ್ರವಾರ ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಅದರ ಪೂರ್ವಸಿದ್ಧತಾ ಕಾರ್ಯಗಳ ಭಾಗವಾಗಿ ರವಿವಾರ ರಾತ್ರಿ ಮಳಿಗೆಯಲ್ಲಿ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಕೆಲಸಗಳು ನಡೆಯುತ್ತಿತ್ತು. ವಿದ್ಯುತ್ ಸಂಪರ್ಕದ ಕೆಲಸ ನಡೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ದಾರಿಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
- Advertisement -








