- Advertisement -
- Advertisement -




ಉಳ್ಳಾಲ: ದೇರಳಕಟ್ಟೆ ಖಾಸಗಿ ಕಾಲೇಜು ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ಉಳ್ಳಾಲಯಲ್ಲಿ ನಡೆದಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವಿದ್ಯಾರ್ಥಿ ಮಾಲೀಕ್ ಅಬೂಬಕರ್ ಎಂದು ಗುರುತಿಸಲಾಗಿದೆ.
ಕೇರಳ ಪಾಲಕ್ಕಾಡ್ ನಿವಾಸಿ ರಾಬಿಯ, ಅಬೂಬಕರ್ ದಂಪತಿಯ ಪುತ್ರ ಮಾಲೀಕ್ ಅಬೂಬಕರ್ ಅವರು ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್‌ವೈಎಸ್ ಶಿಕ್ಷಣ ಪಡೆಯುತ್ತಿದ್ದು, ಅವರು ತಅಬ್ದುಲ್ ಶರೀಫ್ ಎಂಬವರ ಪಿಜಿಯಲ್ಲಿ ವಾಸವಾಗಿದ್ದರು. ನ.13 ರಂದು ರಾತ್ರಿ ಊಟ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಪಿಜಿಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ .
ಈ ಕುರಿತು ಮಾಲೀಕ್ ಅಬೂಬಕರ್ ಅವರ ತಾಯಿಯ ತಮ್ಮ ಫಿಸಿಯೊತೆರಪಿ ವೈದ್ಯ ಅಝಲ್ ಟಿ.ಎ. ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








