Thursday, May 16, 2024
spot_imgspot_img
spot_imgspot_img

ಅಕ್ರಮವಾಗಿ ಮದ್ಯ ಸಾಗಾಟ; 46 ಲಕ್ಷ ಮೌಲ್ಯದ ಮದ್ಯ ಸಹಿತ ಆರೋಪಿ ಪೊಲೀಸ್ ವಶಕ್ಕೆ..!

- Advertisement -G L Acharya panikkar
- Advertisement -

ಉತ್ತರ ಕನ್ನಡ: ಅಕ್ರಮವಾಗಿ ಸಾಗಿಸುತ್ತಿದ್ದ 46 ಲಕ್ಷ ಮೌಲ್ಯದ ಮದ್ಯವನ್ನು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಗೋವಾದಿಂದ ಹೈದರಾಬಾದ್​ಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು. ಈ ವೇಳೆ ಜಿಲ್ಲಾ ಪೊಲೀಸ್ ಕಛೇರಿಯ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಮಹಾರಾಷ್ಟ್ರ ಮೂಲದ ಚಾಲಕ ಸುಧಾಕರ ಅರ್ಜುನ ಗೋಲಾಂಡೆಯನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

- Advertisement -

Related news

error: Content is protected !!