Monday, April 29, 2024
spot_imgspot_img
spot_imgspot_img

ವಿಟ್ಲದ ಜನತೆಗೆ ಕಾಡುತ್ತಿರುವ ಏಕನಿವೇಶನ-ಕಟ್ಟಡ ಪರವಾನಿಗೆ ಸಮಸ್ಯೆ:ಪಟ್ಟಣ ಪಂಚಾಯಿತಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರ ಭೇಟಿ, ಮಾತುಕತೆ

- Advertisement -G L Acharya panikkar
- Advertisement -

ವಿಟ್ಲ: ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಏಕ ನಿವೇಶನ ವಿನ್ಯಾಸ ನಕ್ಷೆ ಮತ್ತು ಕಟ್ಟಡ ಪರವಾನಿಗೆ ಮಾಹಿತಿ ಸಭೆ ಶುಕ್ರವಾರ ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆ ವಹಿಸಿದ್ದರು. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಅವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರತಿ ಗುರುವಾರ ವಿಟ್ಲ ಪಟ್ಟಣ ಪಂಚಾಯಿತಿ ಆಗಮಿಸುತ್ತೇನೆ. ಏಕನಿವೇಶನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಅವರು ಪುತ್ತೂರು ಪ್ರಾಧಿಕಾರಕ್ಕೆ ವಿಟ್ಲ ಪಟ್ಟಣ ಪಂಚಾಯಿತಿ ಅನ್ನು ಸೇರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದರಿಂದ ಏಕನಿವೇಶನ ಮತ್ತು ಕಟ್ಟಡ ಪರವಾನಿಗೆ ಸಮಸ್ಯೆ ಇಥ್ಯರ್ಥಗೊಳ್ಳಲಿದೆ ಎಂದರು.


ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಅರುಣ್ ಎಂ ವಿಟ್ಲ, ರಾಮ್‌ದಾಸ ಶೆಣೈ, ಹಸೈನಾರ್ ನೆಲ್ಲಿಗುಡ್ಡೆ, ಸುನೀತಾ ಕೋಟ್ಯಾನ್, ಸಂಧ್ಯಾ ಮೋಹನ್, ಲತಾ ಅಶೋಕ್,ಅಬೂಬಕ್ಕರ್, ಮುಖ್ಯಾಧಿಕಾರಿ ಮಾಲಿನಿ, ಎಂಜಿನಿಯರ್ ಶ್ರೀಧರ್, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಸಿಬ್ಬಂದಿ ಚಂದ್ರಶೇಖರ ವರ್ಮ, ರತ್ನ, ಶಂಕರ್ ಕೊಲ್ಯ, ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಟ್ಟಡ ಎಂಜಿನಿಯರ್‌ಗಳು ಮೊದಲಾದವರು ಭಾಗವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯಿತಿಯ ಬಿಜೆಪಿ ಪಕ್ಷದ ಎಂಟು ಸದಸ್ಯರು ಈ ಬಾರಿಯೂ ಗೈರು ಹಾಜರಾಗಿದ್ದಾರೆ.


- Advertisement -

Related news

error: Content is protected !!