ಖಂಡನಾ ಮೆರವಣಿಗೆಯಲ್ಲಿ ಹಲವು ಕುಣಿತ ಭಜನೆ ಹಾಗೂ ಭಜನಾ ತಂಡಗಳು ಭಾಗಿ




ವಿಟ್ಲ: ಭಜನಾ ಪರಿಷತ್ ವಿಟ್ಲ ತಾಲೂಕು ಆಶ್ರಯದಲ್ಲಿ ಭಜನೆಯ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ ಮತ್ತು ಭಜನಾ ವಿರೋಧಿ ಪ್ರತಿಭಾ ಕುಳಾಯಿ ವಿರುದ್ಧ ಬೃಹತ್ ಖಂಡನಾ ಮೆರವಣಿಗೆ ಮತ್ತು ಸಭೆ ನ. 3 ನೇ ಆದಿತ್ಯವಾರದಂದು ನಡೆಯಿತು..

ವಿಟ್ಲ ಜೈನ ಬಸದಿ ಬಳಿಯಿಂದ ಸಾಗಿಬಂದ ಖಂಡನಾ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಹಲವು ಕುಣಿತ ಭಜನಾ ತಂಡಗಳು ಹಾಗೂ ಭಜನಾ ತಂಡಗಳು ಭಾಗವಹಿಸಿದವು.



ನಂತರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಖಂಡನಾ ಸಭೆ ನಡೆಯಿತು.

ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಖಂಡನಾ ಸಭೆಯ ಅಧ್ಯಕ್ಷತೆಯನ್ನು ಭಜನಾ ಪರಿಷತ್ ಅಧ್ಯಕ್ಷರು ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ ವಹಿಸಿದ್ದರು.
ಸಭೆಯಲ್ಲಿ ಜಿಲ್ಲಾ ಸಂಯೋಜಕ್ ನರಸಿಂಹ ಮಾಣಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ಪದ್ಮನಾಭ ಕಟ್ಟೆ, ಕೃಷ್ಣಯ್ಯ ವಿಟ್ಲ ಅರಮನೆ, ಪ್ರೇಮಲತಾ, ಸಾಮಾಜಿಕ ಕಾರ್ಯಕರ್ತರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಜನೆಯನ್ನು ವಿರೋಧಿಸಿದ ಹಿಂದೂ ವಿರೋಧಿಗಳ ಬಗ್ಗೆ ತಮ್ಮ ಖಂಡನೆ ವ್ಯಕ್ತಪಡಿಸಿದರು.
ಭಜನಾ ಪರಿಷತ್ ವಿಟ್ಲ ತಾಲೂಕು ಕೋಶಧಿಕಾರಿ ಜಯರಾಮ್ ಶೆಟ್ಟಿ ಬೋಳಂತೂರು ಸ್ವಾಗತಿಸಿ, ಭಜನಾ ಪರಿಷತ್ ವಿಟ್ಲ ತಾಲೂಕು ಕಾರ್ಯದರ್ಶಿ ರಮೇಶ್ ವಿಟ್ಲ ಧನ್ಯವಾದವಿತ್ತರು. ಗಣೇಶ್ ಪಾಲ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಜಕರು, ಸಂಘಟನಾ ಪ್ರಮುಖರು, ಗಣ್ಯರು ಸೇರಿದಂತೆ ಐನೂರಕ್ಕೂ ಅಧಿಕ ಮಂದಿ ಭಾಗವಹಿಸಿದರು.








