Saturday, April 27, 2024
spot_imgspot_img
spot_imgspot_img

ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ವಲಯ ಸಮಿತಿ ಸಭೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ, ಇದರ ವಲಯ ಸಮಿತಿ ರಚಿಸುವ ಎರಡನೇ ವಲಯದ ಸಭೆ, ಶ್ರೀ ಕೈಲಾಸೇಶ್ವರ ದೇವಸ್ಥಾನ, ಶಿವಕ್ಷೇತ್ರ, ಖಂಡಿಗ – ಕೇಪು ಇಲ್ಲಿ ಜರುಗಿತು.

ಕೇಪು ಹಾಗೂ ಪುಣಚ ಗ್ರಾಮಗಳ ಭಜನಾ ಮಂಡಳಿಗಳನ್ನು ಒಗ್ಗೂಡಿಸಿ ವಲಯ ಸಮಿತಿ ರಚಿಸಲಾಯಿತು.
ವಲಯ ಸಮಿತಿಯ ಅಧ್ಯಕ್ಷರಾಗಿ ವೀರಪ್ಪ ಮೂಲ್ಯ ಪುಣಚ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣರಾಜ್ ಕೇಪು ಇವರು ಆಯ್ಕೆಯಾದರು. ಸಮಿತಿಗೆ ಇನ್ನುಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಲಯದ ಎರಡೂ ಗ್ರಾಮಗಳ ಎಲ್ಲಾ ಮಂಡಳಿಗಳ ಅಧ್ಯಕ್ಷ, ಕಾರ್ಯದರ್ಶಿ, ಪ್ರಮುಖರನ್ನು ವಲಯ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಶ್ರೀ ಕೈಲಾಸೇಶ್ವರ ದೇವಸ್ಥಾನ, ಶಿವಕ್ಷೇತ್ರ, ಖಂಡಿಗ – ಕೇಪು ಇದರ ಆಡಳಿತ ಮೊಕ್ತೇಸರರಾದ ರವೀಶ್ ಕೆ.ಎನ್ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಪರಿಷತ್ತಿನ ಕೇಂದ್ರ ಸಮಿತಿಯ ಸಂಚಾಲಕರೂ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ – ಬಂಟ್ವಾಳ ತಾಲೂಕು ಇದರ ಅಧ್ಯಕ್ಷರೂ ಆದ ದಿನೇಶ್ ಮಾಮೇಶ್ವರ ಇವರ ನೇತೃತ್ವದಲ್ಲಿ ವಲಯ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಭೆಯಲ್ಲಿ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಉಪಾಧ್ಯಕ್ಷರಾದ ಶೀನಪ್ಪ ನಾಯ್ಕ ಮಂಗಿಲಪದವು, ಕೋಶಾಧಿಕಾರಿ ದಿನೇಶ್ ಶೆಟ್ಟಿ ಪಟ್ಲ, ಜತೆ ಕಾರ್ಯದರ್ಶಿಗಳಾದ ಜಯರಾಮ್ ನಾಯ್ಕ್ ಕುಂಟ್ರಕಲ, ಮತ್ತು ಅನೇಕ ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!