Friday, March 21, 2025
spot_imgspot_img
spot_imgspot_img

ವಿಟ್ಲ: (ಫೆ.7) ಜಟಾಧಾರಿ ಮೈಮೆ ಹಾಗೂ ರಾಜನ್ ಗುಳಿಗ ದೈವದ ನೇಮೋತ್ಸವ ಪ್ರಯುಕ್ತ ಕಲ್ಜಿಗದ ಕಾಳಿ ಮಂತ್ರದೇವತೆ ತುಳು ಪೌರಾಣಿಕ ನಾಟಕ

- Advertisement -
- Advertisement -

ವಿಟ್ಲ: ಜಟಾಧಾರಿ ಮೈಮೇ ಹಾಗೂ ರಾಜನ್ ಗುಳಿಗ ದೈವದ ನೇಮೋತ್ಸವ ಪ್ರಯುಕ್ತ ಶ್ರೀ ದುರ್ಗಾ ಕಲಾತಂಡದ ಪುಗರ್ತೆ ಕಲಾವಿದೆರ್ ಅಭಿನಯದ ಕಲ್ಜಿಗದ ಕಾಳಿ ಮಂತ್ರದೇವತೆ ತುಳು ಹಾಗೂ ಕನ್ನಡ ಪೌರಾಣಿಕ ನಾಟಕ ಪ್ರಥಮಬಾರಿಗೆ ವಿಟ್ಲದಲ್ಲಿ ಫೆ.7ನೇ ಶುಕ್ರವಾರದಂದು ರಾತ್ರಿ 11:00 ಗಂಟೆಗೆ 87 ನೇ ಪ್ರಯೋಗ ನಡೆಯಲಿದೆ.

ಈ ನಾಟಕವು ಮಂಗಳೂರು ಉಡುಪಿ ಬೈಂದೂರು ಹಾಗೂ ಕೇರಳ ರಾಜ್ಯದಲ್ಲೂ ತುಳು ಹಾಗೂ ಕನ್ನಡ ಭಾಷೆಯಲ್ಲಿ ಪ್ರಧರ್ಶನಗೊಂಡು ಕಲಾಭಿಮಾನಿಗಳ ಹೃದಯ ಗೆದ್ದು 100 ನೇ ಪ್ರಯೋಗದತ್ತ ಮುನ್ನುಗುತ್ತಿದೆ. ಈ ನಾಟಕವು ಶ್ರೀ ನಾಗ ಶ್ರೀ ಜಟಾಧಾರಿ ರಾಜನ್ ಗುಳಿಗ ಸೇವಾ ಸಮಿತಿಯವರ ಕಡೆಯಿಂದ ವಿಟ್ಲದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.

ಈ ನಾಟಕದ ನಿರ್ದೇಶನ ನಿತಿನ್ ಹೊಸಂಗಡಿಯವರಿಂದ ಮೂಡಿ ಬಂದಿದು, ಕಲಾಸಂಗಮದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ರಂಗದ ರಾಜೇ ಸುಂದರ ರೈ ಮಂದಾರ ರವರ ಸಂಪೂರ್ಣ ಸಲಹೆ ಸಹಕರದ ಜೊತೆಗೆ ಯಕ್ಷದ್ರುವ ಸತೀಶ್ ಪಟ್ಲರವರ ಹಿನ್ನಲೆ ಗಾಯನದಿಂದ ಮೂಡಿ ಬಂದಿದೆ.

- Advertisement -

Related news

error: Content is protected !!