Sunday, June 21, 2026
spot_imgspot_img
spot_imgspot_img

ವಿಟ್ಲ: ಕುಂಬಾರರ ಗುಡಿ ಕೈಗಾರಿಕಾ ಸಹಕಾರ (ನಿ.) ಪುತ್ತೂರು ಇದರ ವಿಟ್ಲ ಶಾಖೆಯ ಕೋಣೆ ಉದ್ಘಾಟನೆ ಹಾಗೂ ಸ್ಥಳಾಂತರ ಸಮಾರಂಭ

- Advertisement -
- Advertisement -

ಕುಂಬಾರರ ಗುಡಿ ಕೈಗಾರಿಕಾ ಸಹಕಾರ (ನಿ.) ಪುತ್ತೂರು ಇದರ ವಿಟ್ಲ ಶಾಖೆಯ ಕೋಣೆ ಉದ್ಘಾಟನೆ ಹಾಗೂ ಸ್ಥಳಾಂತರ ಸಮಾರಂಭ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕೀರ್ಣದಲ್ಲಿ ನಡೆಯಿತು.

ನೂತನ ಶಾಖೆಯನ್ನು ಸಂತೋಷ್ ಕುಮಾರ್ ರೈ ನಳೀಲು, ಆಡಳಿತ ಮೊಕ್ತೇಸರರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಳೀಲು ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಚಂದಪ್ಪ ಮೂಲ್ಯ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್‌ ಬಿ.ಎಸ್.ಎಫ್ ಮಾಲಕರು ಅಮೂಲ್ಯ ಗ್ಯಾಸ್ ಏಜೆನ್ಸಿ ಉಪ್ಪಿನಂಗಡಿ ಇವರು ಶಾಖೆಯ ಕಟ್ಟಡ ಕೋಣೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿ ಕೃಷ್ಣ ಕಿಶೋರ್ ಎನ್ ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮಯೂರ್ ಉಳ್ಳಾಲ್ ಅಧ್ಯಕ್ಷರು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇವರು ಗಣಕ ಯಂತ್ರ ಉದ್ಘಾಟನೆ ಮಾಡಿದರು.
ಬಳಿಕ ಭಾಸ್ಕರ ಎಂ ಪೆರುವಾಯಿ ಅಧ್ಯಕ್ಷರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ.ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಾಬು ಕೆ.ವಿ ಅಧ್ಯಕ್ಷರು ಕುಲಾಲ ಸಂಘ ವಿಟ್ಲ, ಜಗನ್ನಾಥ ರೈ ನ್ಯಾಯವಾದಿಗಳು ಅಧ್ಯಕ್ಷರು ವಕೀಲರ ಸಂಘ ಪುತ್ತೂರು, ಪೀಟರ್ ಎಫ್ ಲಸ್ರಾದೋ ಮಾಲಕರು ಎಂಪಾಯರ್ ಮಾಲ್ ವಿಟ್ಲ, ರಮನಾಥ ವಿಟ್ಲ, ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತ್, ಸಂಜೀವ ಪೂಜಾರಿ ಮಾಲಕರು, ಭಾರತ್ ಅಡಿಟೋರಿಯಂ ವಿಟ್ಲ, ರಾಮ ಮೂಲ್ಯ ಇಂಜಿನಿಯರ್ ವಿಟ್ಲ, ವಸಂತ ಮೂಲ್ಯ ಎರುಂಬು ನಿರ್ದೇಶಕರು ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘ ಅಳಿಕೆ, ಮಹಮ್ಮದ್ ಹನೀಫ್ ಸ್ಮಾರ್ಟ್ ಸಿಟಿ ವಿಟ್ಲ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ಸ್ಥಳಾಂತರ ಶಾಖೆಗೆ ಶುಭಹಾರೈಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ ಮೂಲ್ಯ ಸ್ವಾಗತಿಸಿ, ಶಾಖಾ ಪ್ರಬಂಧಕರು ಗಣೇಶ್ ಕುಮಾರ್ ಟಿ ಧನ್ಯವಾದವಿತ್ತರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು, ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!