Saturday, July 25, 2026
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

- Advertisement -
- Advertisement -

ವಿಟ್ಲ: ತುರ್ತು ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನ ಸರ್ವ ಸದಸ್ಯರ ಒಮ್ಮತದೊಂದಿಗೆ ಟ್ಯಾಕ್ಸ್ ಏರಿಕೆ ಮಾಡಲಾಗಿದ್ದರೂ ಪಟ್ಟಣ ಪಂಚಾಯತ್ ನ ಆಡಳಿತ ಪಕ್ಷದ ವಿರುದ್ಧ ಸ್ವಾಪಕ್ಷೀಯರೇ ಪತ್ರಿಕಾಗೋಷ್ಠಿ ನಡೆಸಿ ಪಟ್ಟಣ ಪಂಚಾಯತ್ ವಿರುದ್ಧ ಆರೋಪ ಮಾಡಿರುವುದರ ಬಗ್ಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ಬೆಂಬಲಿತ ಸದಸ್ಯರು ಪಟ್ಟು ಹಿಡಿದ ಘಟನೆ ಸೆ.೨೯ರಂದು ವಿಟ್ಲ ಪಟ್ಟಣ ಪಂಚಾಯತ್ ನ ಸಭಾಂಗಣದಲ್ಲಿ ಅಧ್ಯಕ್ಷೆ ದಮಯಂತಿಯವರ ಅದಸ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆದಿದೆ.

  ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೆಲವರ ಸಹಿತ ಕಾಂಗ್ರೆಸ್ ಬೆಂಬಲಿತ ಪಟ್ಟಣ ಪಂಚಾಯತ್  ಸದಸ್ಯೆಯೋರ್ವರ ಪತಿ ಸೇರಿಕೊಂಡು ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ತೆರಿಗೆ ಏರಿಸಿರುವುದನ್ನು ಹಾಗೂ ಸ್ವಚ್ಚತಾ ಕೆಲಸಗಾರರ ವಿರುದ್ಧ ಇಲ್ಲ ಸಲ್ಲದ ಆರೋಪಹೊರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದರು.

ತುರ್ತು ಸಭೆಯನ್ನು ಕರೆದು ತೆರಿಗೆ ಏರಿಸಿರುವುದು ನಿಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಹೊರತು ಬಿಜೆಪಿಯವರು ಅದ್ಯಕ್ಷ ರಾಗಿದ್ದಗ ಅಲ್ಲ. ಇದೀಗ ನಿಮ್ಮ ಪಕ್ಷದವರೇ ಪಟ್ಟಣ ಪಂಚಾಯತ್ ವಿರುದ್ಧ ಆರೋಪ ಮಾಡಿರುವುದು ಸರಿಯೇ, ಹಾಗಾದರೆ ನಿಮ್ಮ ಮೇಲೆ ಅವರಿಗೆ ವಿಶ್ವಾಸ ಇಲ್ಲ ಎಂದು ಅರ್ಥವೇ ಎಂದು ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ ಕೇಳಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೂಡಲೇ ಸಭೆಯಲ್ಲೇ ನಮಗೆ ಅಧ್ಯಕ್ಷರು ಸ್ಪಷ್ಠೀಕರಣ ನೀಡಬೇಕು ಎಂದು ಬಿಜೆಪಿ ಬೆಂಬಲಿತ ಇತರ ಸದಸ್ಯರು ಪಟ್ಟಹಿಡಿದರು. ಈ ವೇಳೆ ಸದಸ್ಯ ರವಿಪ್ರಕಾಶ್ ರವರು ಮಾತನಾಡಿ ನಾವೆಲ್ಲರೂ ಸೇರಿ ಸಭೆ ನಡೆಸಿ ತೆರಿಗೆ ಏರಿಸಿರುವುದು.‌ಇತರ ಪಟ್ಟಣ ಪಂಚಾಯತ್ ಅನ್ನು  ನಾವು ಹೋಲಿಕೆ ಮಾಡಿದರೆ ನಮ್ಮಲ್ಲಿ ಬಹಳಷ್ಟು ಕಡಿಮೆ ಇರುವುದು. ಇಷ್ಟೆಲ್ಲ ಮಾಡಲಾಗಿದ್ದರೂ ಸ್ವಪಕ್ಷೀಯರೇ ಪತ್ರಿಕಾಗೋಷ್ಟಿ ನಡೆಸಿರುವುದರ ಕುರಿತು ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕೆಂದರು.  

ಈ ವೇಳೆ ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿಯವರು ಮಾತನಾಡಿ ಪಕ್ಷದ ವಿಚಾರ ಬಂದಾಗ ನಮ್ಮ ಅಥವಾ ಅಧ್ಯಕ್ಷರ ಗಮನಕ್ಕೆ ಅದನ್ನು ತರಬೇಕಿತ್ತು. ಆದರೆ ನಮ್ಮಿಬ್ಬರ ಗಮನಕ್ಕೆ ಈ ವಿಚಾರವನ್ನು ತರಲಿಲ್ಲ. ನಾವದನ್ನು ನಮ್ಮ ಬ್ಲಾಕ್ ಅಧ್ಯಕ್ಷರಾಗಿರು ಮುರಳೀಧರ ರೈ ಮಠಂತಬೆಟ್ಟುರವರ ಗಮನಕ್ಕೆ ತಂದಿದ್ದೇವೆ. ಅವರು ಮಾಡಿರುವುದು ಸರಿಯಾದ ಕೆಲಸವಲ್ಲ. ಸರಕಾರ ತೆರಿಗೆ ಏರಿಕೆ ಮಾಡಿ ಎಂದಾಗಲೂ ನಾವು ತೆರಿಗೆ ಏರಿಸಿರಲಿಲ್ಲ. ಆ ಬಳಿಕ ತೆರಿಗೆ ಏರಿಸದಿದ್ದಲ್ಲಿ ಅನುದಾನದಲ್ಲಿ ಕಡಿಯವಾಗುತ್ತದೆ ಎಂದು ಜಿಲ್ಲಾಧಿಕಾರಿಯವರಿಂದ ಆದೇಶ ಬಂದಾಗ ನಾವೆಲ್ಲರೂ ಮಾತನಾಡಿ ತುರ್ತಾಗಿ ವಿಶೇಷ ಸಭೆಯನ್ನು ಕರೆದು ಕನಿಷ್ಟ ೧೫% ತೆರಿಗೆಯನ್ನು ಹೆಚ್ಚಿಸಿದ್ದೇವೆ‌. ಪಕ್ಷದ ವಕ್ತಾರರೆಂದು ಹೇಳಿಕೊಂಡು ಪತ್ರಿಕಾಗೋಷ್ಠಿ ಮಾಡಿದ್ದಾರೆ.

ಅವರು ಮಾಡಿರುವುದು ಸರಯಾದ ಕೆಲಸವಲ್ಲ. ಈ ಬಗ್ಗೆ ಮಾತುಕಥೆ ನಡೆಸುವುದಾಗಿ ಬ್ಲಾಕ್ ಅಧ್ಯಕ್ಷರು ತಿಳಿಸಿದ್ದಾರೆ. ನಮ್ಮ ಪಟ್ಟಣ ಪಂಚಾಯತ್ ಸದಸ್ಯೆಯೋರ್ವರ ಪತಿಯೇ ಈ ಪತ್ರಿಕಾಗೋಷ್ಠಿಯಲ್ಲಿ ಕುಳಿತಿದ್ದರು ಇದು ಬೇಸರದ ಸಂಗತಿ ಯಾಗಿದೆ. ತಪ್ಪು ಆಗಿ ಹೋಗಿದೆ ಪಕ್ಷದ ವಿಚಾರವಾಗಿರುವುದರಿಂದ ಈ ಬಗ್ಗೆ  ಬ್ಲಾಕ್ ಅಧ್ಯಕ್ಷರ ಗಮನಕ್ಕೆ ನಾವು ತಂದಿದ್ದೇವೆ ಎಂದರು. ಈ ವೇಳೆ ಅದ್ಯಕ್ಷ ರಾದ ದಮಯಂತಿಯವರು ಮಾತನಾಡಿ ಅವರು ಪತ್ರಿಕಾಗೋಷ್ಠಿ ನಡೆಸಿರುವ ವಿಚಾರ ನನ್ನ ಗಮನಕ್ಕೆ ಬಂದಿರುವುದಿಲ್ಲ.  ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೋಡಿಯೇ ನನಗೆ ವಿಚಾರ ತಿಳಿದಿರುವುದು.

ಜನಸಾಮಾನ್ಯರಿಂದಲೂ ನನಗೆ ಹಲವಾರು ಕರೆಗಳು ಬಂದಿದೆ. ನಿಮ್ಮ ಪಕ್ಷದವರೇ ನಿಮಗೆ ವಿರೋಧವೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಪಟ್ಟಣ ಪಂಚಾಯತ್ ಸದಸ್ಯರ ಪತಿ ಪತ್ರಿಕಾಗೋಷ್ಠಿ ಯಲ್ಲಿ ಭಾಗಿಯಾಗಿದ್ದರೂ ಸದಸ್ಯೆ ಭಾಗಿಯಾದಂತೆ. ಅವರು ಮಾಡಿರುವುದು ತಪ್ಪುಕೆಲಸವಾಗಿದೆ‌. ನಾನು ಪತ್ರಿಕಾಗೋಷ್ಠಿ  ನಡೆಸಿದವರಿಕಗೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದೆ. ಆದರೆ ಅವರ ಕರೆ ಸಿಗಲಿಲ್ಲ. ಈ ಬಗ್ಗೆ ನಾವಿಬ್ಬರೂ ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಎಂದರು.  

ನಮ್ಮ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ  ದಿನದಿಂದ ದಿನಕ್ಕೆ ಬೀದಿಬದಿಯ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಈ ಬಗ್ಗೆ ಗಮನಹರಿಸುವುದು ಅಗತ್ಯ ಎಂದು ರಾಮ್ ದಾಸ್ ಶೆಣೈ ಅವರು ಹೇಳಿದರು. ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಯಾವುದೇ ಒಂದು ಪ್ರಾಜೆಕ್ಟ್ ಮಾಡುವಾಗ ಮೊದಲು ನಿಗದಿ ಪಡಿಸಿದ ಸ್ಥಳದಲ್ಲೇ ನಡೆಯಬೇಕು. ಅದು ಬಿಟ್ಟು ಸಭೆಯಲ್ಲಿ ಸದಸ್ಯರು ಹೇಳುವುದು ಒಂದು ಕಡೆ ಕೆಲಸ ಮಾಡಿಸಲು, ನೀವು ಇನ್ನೊಂದು ಕಡೆ ಮಾಡುವುದು ಅದು ಸರಿಯಾದ ವಿಚಾರವಲ್ಲ.

ಒಂದು ವೇಳೆ ಕೆಲಸದ ಸ್ಥಳದಲ್ಲಿ ಬದಲಾವಣೆ ಇದ್ದರೆ ಆಯಾಯ ವಾರ್ಡ್ ನ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯ ಶ್ರೀ ಕೃಷ್ಣ ಹೇಳಿದರು. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಎಂಜಿನಿಯರ್‌ ಶ್ರೀಧರ್ ಹೇಳಿದರು.

ಉಪಾಧ್ಯರಾದ ಜಯಂತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ ಕಲ್ಲಕಟ್ಟ,  ಸದಾ್ಯರಾದ ಲೋಕನಾಥ ಶೆಟ್ಟಿ, ,  ಸುನಿತಾ ಕೋಟ್ಯಾನ್, ಲತಾ‌ಅಶೋಕ್ ಕುಮಾರ್, ಇಂದಿರಾ ಅಡ್ಡಾಳಿ, ಉಷಾ ಕೃಷ್ಣಪ್ಪ, ಚಂದ್ರಕಾಂತಿ ಶೆಟ್ಟಿ,  ಸಂದ್ಯಾ ಮೋಹನ್, ರವಿಪ್ರಕಾಶ್, ಹಸೈನಾರ್ ನೆಲ್ಲಿಗುಡ್ಡೆ,ಅಬೂಬಕ್ಕರ್ ಒಕ್ಕೆತ್ತೂರು, ಗೀತಾ ಪುರಂದರ, ಮುಖ್ಯಾಧಿಕಾರಿ ಮಾಲಿನಿ  ಸಭೆಯಲ್ಲಿ‌ ಉಪಸ್ಥಿತರಿದ್ದರು. ಸಿಬಂದಿ ರತ್ನ ಹಾಗೂ ಚಂದ್ರ ಶೇಖರ ವರ್ಮರವರು ಸಹಕರಿಸಿದರು.

- Advertisement -

Related news

error: Content is protected !!