
ವಿಟ್ಲ: ಕೇರಳ ಗಡಿ ಪ್ರದೇಶವಾಗಿರುವ ವಿಟ್ಲದ ಪೆರುವಾಯಿ ಗ್ರಾಮದ ಅಶ್ವಥನಗರ ಬಳಿಯಿರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಅವರಣದಿಂದ ನಾಲ್ಕು ಗೋವುಗಳು ಇಬ್ಬರು ಮುಸುಕುದಾರಿಗಳಿಂದ ಕಳ್ಳತನವಾಗಿ ಇಂದಿಗೆ ಆರು ದಿನ ಕಳೆದಿದ್ದು,
ಎಫ್ ಐ ಆರ್ ದಾಖಲಿಸಿ ನಾಲ್ಕು ದಿನ ಕಳೆದಿದೆ. ಆದರೂ ಇಂದಿಗೂ ಗೋವುಗಳ ಪತ್ತೆಯಾಗಿಲ್ಲ.

ಈ ನಿಟ್ಟಿನಲ್ಲಿ ಪುತ್ತೂರು ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಗೋವು ಕಳೆದುಕೊಂಡ ಪೆರುವಾಯಿಯ ಗಣೇಶ್ ಎಂಬವರ ಮನೆಗೆ ಭೇಟಿ ನೀಡಿ ಘಟನೆ ಬಗ್ಗೆ ವಿಚಾರಿಸಿದರು. ಬಳಿಕ ವಿಟ್ಲ ಪೋಲಿಸ್ ಠಾಣೆಗೆ ತೆರಳಿ ತನಿಖೆಯ ಪ್ರಗತಿ ಬಗ್ಗೆ ಪೋಲಿಸ್ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡು ಶೀಘ್ರವಾಗಿ ಗೋ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ವತಿಯಿಂದ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಮಠ ಮಂದಿರ ಆರ್ಚಕ ಪುರೋಹಿತ ಸಂಪರ್ಕ ಪ್ರಮುಖರಾದ ಪದ್ಮನಾಭ ಕಟ್ಟೆ, ಪ್ರಮುಖರಾದ ಯತೀಶ್ ಪೆರುವಾಯಿ ಉಪಸ್ಥಿತರಿದ್ದರು.










