Saturday, July 25, 2026
spot_imgspot_img
spot_imgspot_img

ವಿಟ್ಲ: ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ; ಯೋಧರಿಗೆ ಸನ್ಮಾನ

- Advertisement -
- Advertisement -

ವಿಟ್ಲ: ವಿಟ್ಲ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಬೊಬ್ಬೆಕೇರಿ ಗಜಾನನ ಸಭಾಭವನದಲ್ಲಿ ನಡೆಯಿತು.

ಜಿಲ್ಲಾ ಸದಸ್ಯತ್ವ ಅಭಿವೃದ್ಧಿ ಅಧಿಕಾರಿ ಡಾ. ಅರವಿಂದ ಭಟ್ ಅವರು ವಿಟ್ಲ ರೋಟರಿ ಕ್ಲಬ್ ನೂತನ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ ಮತ್ತು ಕಾರ್ಯದರ್ಶಿ ಸೋಮಶೇಖರ್ ಅವರಿಗೆ ಪದಗ್ರಹಣ ನಡೆಸಿಕೊಟ್ಟರು. ಈ ಸಂದರ್ಭ ಮಾತನಾಡಿದ ಅವರು ರೋಟರಿ ಕ್ಲಬ್ ನಿರಂತರ ಸಮಾಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ನಾಯಕತ್ವವನ್ನು ಕಲಿಸಿಕೊಡುತ್ತದೆ. ರೋಟರಿ ಕ್ಲಬ್ ಮೂಲಕ ಉದ್ಯೋಗ ವೃದ್ಧಿ ಮತ್ತು ವಿವಿಧ ಕ್ಷೇತ್ರಗಳ ಅನುಭವವನ್ನು ಕಲಿಸುತ್ತದೆ ಎಂದು ತಿಳಿಸಿದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ದೀಪಾ, ಸುಶೀಲಾ, ಚಂದ್ರಾವತಿ ಮತ್ತು ಜ್ಯೋತಿ, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವನಿತಾ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸುಚಿತಾ ಮತ್ತು ರೋಟರಿ ಕ್ಲಬ್ ವಲಯ ಸೇನಾನಿ, ನಿವೃತ್ತ ಸೈನಿಕ ಚಂದಪ್ಪ ಮೂಲ್ಯ ಅವರನ್ನು ಕಾರ್ಗಿಲ್ ದಿನದ ಪ್ರಯುಕ್ತ ಸನ್ಮಾನಿಸಲಾಯಿತು.

ನಾರಾಯಣ ಅವರ ಮನೆ ನಿರ್ಮಾಣಕ್ಕೆ ಧನ ಸಹಾಯ, ಶ್ರೀಕಾಂತ್ ಪುತ್ತೂರು ಅವರಿಗೆ ಚಿಕಿತ್ಸೆಗೆ ಧನ ಸಹಾಯ, ಅಡ್ಯನಡ್ಕ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಧನಸಹಾಯ ಮತ್ತು ಡಾ. ಚರಣ್ ಕಜೆ ಅವರಿಂದ ಕನ್ಯಾನ ಭಾರತ ಸೇವಾಶ್ರಮಕ್ಕೆ ದೇಣಿಗೆ ನೀಡಲಾಯಿತು.

ಈ ವೇಳೆ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭ ರೋಟರಿ ಸಹಾಯಕ ಗವರ್ನರ್ ಸುರೇಂದ್ರ ಕಿನಿ, ರೋಟರಿ ಕ್ಲಬ್ ವಲಯ ಕಾರ್ಯದರ್ಶಿ ಜಯರಾಮ ರೈ, ವಿಟ್ಲ ರೋಟರಿ ಕ್ಲಬ್ ನಿರ್ಗಮನ ಅಧ್ಯಕ್ಷ ಕೃಷ್ಣ ಭಟ್, ನಿರ್ಗಮನ ಕಾರ್ಯದರ್ಶಿ ಪ್ರಕಾಶ್ ನಾಯಕ್, ರೋಟರಿ ಕ್ಲಬ್ ಕಾರ್ಯದರ್ಶಿ ಸೋಮಶೇಖರ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಮೋದ್ ಮಲ್ಲಾರ ಉಪಸ್ಥಿತರಿದ್ದರು.

ರಮೇಶ್ ಬಿ.ಕೆ ಮತ್ತು ಡಾ.ವಿ.ಕೆ ಹೆಗ್ಡೆ ನಿರೂಪಿಸಿದರು. ಕ್ಲಿಪರ್ಡ್ ವೇಗಸ್, ಜೈ ಕಿಶನ್, ರಶೀದ್ ವಿಟ್ಲ, ಸಂಜೀವ ಪೂಜಾರಿ, ಕಿರಣ್ ಕುಮಾರ್ ಬ್ರಹ್ಮಾವರ ಅತಿಥಿಗಳ ಪರಿಚಯ ಮಾಡಿದರು.

- Advertisement -

Related news

error: Content is protected !!