- Advertisement -
- Advertisement -
ವಿಟ್ಲ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕ ಇದರ ದ್ವಿತೀಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಸಂಜೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಘಟಕದ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ಕೆ,ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪೂವಪ್ಪ ಶೆಟ್ಟಿ ಅಳಿಕೆ, ಹಾಗೂ ಪದಾಧಿಕಾರಿಗಳಾದ ಶ್ರೀ ಸಂಜೀವ ಪೂಜಾರಿ ಕೆ, ಶ್ರೀ ಡಿ ಸಂಜೀವ ಪೂಜಾರಿ, ಶ್ರೀ ಕೊರಗಪ್ಪ ಶೆಟ್ಟಿ ಪಟ್ಲಗುತ್ತು, ಶ್ರೀ ಭಾಸ್ಕರ್ ಶೆಟ್ಟಿ ವೀರಕಂಭ, ಶ್ರೀ ಸುರೇಶ್ ಶೆಟ್ಟಿ ಪಡಿಬಾಗಿಲು.

ಶ್ರೀ ರಾಜೇಂದ್ರ ರೈ ಪಡಿಬಾಗಿಲು, ಶ್ರೀ ಜಗಜೀವನರಾಮ್ ಶೆಟ್ಟಿ ಬೇಡೆಮಾರ್, ಶ್ರೀ ಸಂದೇಶ್ ಶೆಟ್ಟಿ ಬಿಕ್ನಾಜೆ, ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ಶ್ರೀ ದಿವಾಕರ ಶೆಟ್ಟಿ, ಶ್ರೀ ರೂಪೇಶ್ ರೈ ಅಳಿಕೆಗುತ್ತು, ಶ್ರೀ ರಾಜಶೇಖರ ಶೆಟ್ಟಿ ತಾರಿಪಡ್ಪು, ಶ್ರೀ ಸದಾನಂದ ಗೌಡ ಸೇರಾಜೆ ಹಾಗೂ ಇತರರು ಪಾಲ್ಗೊಂಡರು.


- Advertisement -








