Saturday, July 25, 2026
spot_imgspot_img
spot_imgspot_img

ವಿಟ್ಲ: ಕೇಂದ್ರ ಜುಮಾ ಮಸೀದಿಯಲ್ಲಿ ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ

- Advertisement -
- Advertisement -

ವಿಟ್ಲ: ವಿಟ್ಲ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್‌ನ ವತಿಯಿಂದ ‘ಶ್ರದ್ಧಾಕೇಂದ್ರಗಳಲ್ಲಿ ವನಮಹೋತ್ಸವ’ ಕಾರ್ಯಕ್ರಮದ ಪ್ರಯಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ, ಲಯನ್ ಪ್ರಾಂತೀಯ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ಕೋಶಾಧಿಕಾರಿ ಗಂಗಾಧರ್, ಸದಸ್ಯರುಗಳಾದ ಮಹಮ್ಮದ್ ಇಕ್ಬಾಲ್, ಮಂಗೇಶ್ ಭಟ್, ಪ್ರಕಾಶ್, ಖಲಂದರ್, ಅಬೂಬಕ್ಕರ್ ಮತ್ತು ಪ್ರಭಾಕರ ಶೆಟ್ಟಿ, ಲಿಯೋ ಕ್ಲಬ್ ಅಧ್ಯಕ್ಷೆ ಯುಕ್ತಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಳೆಮನೆ, ಉಪಾಧ್ಯಕ್ಷ ವಿ ಕೆ ಹಂಝ, ಕಾರ್ಯದರ್ಶಿ ಇಸ್ಮಾಯಿಲ್ ಪರ್ತಿಪ್ಪಾಡಿ, ಹೊರೈಝನ್ ಶಾಲಾ ಸುರಕ್ಷಾ ಸಮಿತಿಯ ಅಬೂಬಕ್ಕರ್ ಅನಿಲಕಟ್ಟೆ ಭಾಗವಹಿಸಿದ್ದರು.

- Advertisement -

Related news

error: Content is protected !!