Tuesday, March 2, 2021

ವಿಟ್ಲ: ರಥ ಗದ್ದೆಯಲ್ಲಿ ಇಂದು ರಾತ್ರಿ 8 ಗಂಟೆಗೆ “ವಿಟ್ಲೋತ್ಸವ- 2021”

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಕಳೆದ 27 ವರ್ಷಗಳಿಂದ ಆಕರ್ಷಣೀಯ ವೇದಿಕೆಯಲ್ಲಿ ಕಲಾಭಿಮಾನಿಗಳನ್ನು ಸೆಳೆಯುವ ಹಲವಾರು ವಿಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಹೆಮ್ಮೆಯ ತಂಡವಾದ ರಮಾನಾಥ್ ವಿಟ್ಲ ಸಾರಥ್ಯದ “ವಿ.ಆರ್.ಸಿ ವಿಟ್ಲ” ಇದರ ಆಶ್ರಯದಲ್ಲಿ.

ಇದೀಗ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಇಂದು ರಾತ್ರಿ 8ಕ್ಕೆ ಶ್ರೀ ದೇವರ ರಥ ಗದ್ದೆಯಲ್ಲಿ 28ನೇ ವರ್ಷದ “ವಿಟ್ಲೋತ್ಸವ 2021” ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರವರು ರಚಿಸಿ, ನಟಿಸಿ, ನಿರ್ದೇಶಿಸಿರುವ ಚಾಪರ್ಕ ಕಲಾವಿದರಿಂದ  “ನಮಸ್ಕಾರ ಮಾಷ್ಟ್ರೇ” ಎಂಬ ತುಳು ಹಾಸ್ಯಮಯ ನಾಟಕ  ನಡೆಯಲಿದೆ.

- Advertisement -

MOST POPULAR

HOT NEWS

Related news

error: Content is protected !!