



ವಿಟ್ಲ: ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ಅನಿಲಕಟ್ಟೆ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಇದರ ಜಂಟಿ ವಾರ್ಷಿಕೋತ್ಸವ ನಡೆಯಿತು.
ಕಾರ್ಯಕ್ರಮವನ್ನು ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರು ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನೋಟರಿ ನ್ಯಾಯವಾದಿ ರಾಮಣ್ಣ ಗೌಡ, ಪ್ರಗತಿ ಪರ ಕೃಷಿಕ ವಿನ್ಸಿ ಡಿ ಸೋಜಾ, ಎಂ ಆರ್ ಪಿ ಎಲ್ ಉದ್ಯೋಗಿ ಯಶವಂತ ಪಿ ಎಂ, ಬಂಟ್ವಾಳ ಆಂತರಿಕ ಭದ್ರತಾ ವಿಭಾಗದ ಮುಖ್ಯ ಆರಕ್ಷಕಿ ಗೀತಾ ಶ್ರೀಧರ್ ಮತ್ತು ಈಶ್ವರ ಭಟ್ ಪೂರ್ಲಪ್ಪಾಡಿ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಿಗೆ ನಡೆಸಿದ ವಿವರ ಆಟೋಟ ಮತ್ತು ಇತರ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ವೀರಪ್ಪ, ಗಣೇಶ್, ರಮೇಶ್ ಮತ್ತು ರವಿ ವರ್ಮ ವಿಟ್ಲ ಅರಮನೆ ಇವರನ್ನು ಸನ್ಮಾನಿಸಲಾಯಿತು.


ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ದೇವರಮನೆ ಇವರು ಪ್ರಸ್ತಾವಿಸಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸೌಮ್ಯಲತಾ ಶಾಲಾ ವರದಿ ವಾಚಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಯಲಕ್ಷ್ಮಿ ಸಂಘದ ವರದಿ ವಾಚಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನವೀನ್ ಕಂಡಿಗ ವಂದಿಸಿದರು. ರಜಿತ್ ಆಳ್ವ ನಿರೂಪಿಸಿದರು. ಮೋನಪ್ಪ ಗೌಡ ಸಹಕರಿಸಿದರು.










