




ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಡಿಸೆಂಬರ್ 31-12-2025ನೇ ಬುಧವಾರ ಮತ್ತು ಜನವರಿ 1-01-2026ನೇ ಗುರುವಾರದವರೆಗೆ ನಡೆಯಲಿದೆ.
ದಿನಾಂಕ : 31-12-2025ನೇ ಬುಧವಾರ ಬೆಳಿಗ್ಗೆ 8.30ಕ್ಕೆ ಗಣಪತಿ ಹೋಮ, ನಾಗತಂಬಿಲ ನಡೆದು ಬೆಳಿಗ್ಗೆ 11.00ಕ್ಕೆ ಕಲಶಾಭಿಷೇಕ ಬಳಿಕ ಮಧ್ಯಾಹ್ನ 12.00ಕ್ಕೆ : ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 5.00ರಿಂದ ರಂಗಪೂಜೆ, ಸಾಮೂಹಿಕ ದುರ್ಗಾಪೂಜೆ ಉತ್ಸವಬಲಿ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ : 01-01-2026ನೇ ಗುರುವಾರ ಬೆಳಿಗ್ಗೆ 7.00ರಿಂದ ಶ್ರೀ ಭೂತಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ ಬೆಳಿಗ್ಗೆ ಪೂಜೆ, ಮಧ್ಯಾಹ್ನ ಪೂಜೆ ನಡೆಯಲಿದೆ. ಅಪರಾಹ್ನ 5.00ರಿಂದ : ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಲಶ ಪೂರಣೆ, ಪೇಟೆ ಸವಾರಿ, ಶುದ್ಧ ಕಲಶಾಭಿಷೇಕ, ರಾತ್ರಿ ಪೂಜೆ ನಡೆದು ರಾತ್ರಿ 10.00ಕ್ಕೆ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 7.00ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ – ಇವರಿಂದ “ತ್ರಿಜನ್ಮ ಮೋಕ್ಷ” ಯಕ್ಷಗಾನ ಬಯಲಾಟ ನಡೆಯಲಿದೆ.
ಸುರೇಶ್ ನೇತೃತ್ವದ ಕಲಾರಸಿಕ ಬೊಂಬೆ ಬಳಗ ವಿಟ್ಲ – ಇವರಿಂದ ಕಲಾಸೇವೆ ಮತ್ತು ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಸೇವೆ” ಮೂಲಕ ಶ್ರೀ ಸ್ವಾಮಿಯ ಪೇಟೆ ಸವಾರಿ ನಡೆಯಲಿದೆ.








