

ವಿಟ್ಲ: ಕಲಾಪೋಷಕರು ವಿಟ್ಲ ಇವರ ಆಶ್ರಯದಲ್ಲಿ ದಿವ್ಯಜ್ಯೋತಿ ಕಲಾವಿದೆರ್, ಎರುಂಬು-ಅಳಿಕೆ ಅಭಿನಯದ ಮೋಹನ್‌ದಾಸ್ ರೈ ಎರುಂಬು ನಿರ್ದೇಶನದ “ಮದಿಮೆದ ಇಲ್ಲಡ್” ಎಂಬ ತುಳು ಹಾಸ್ಯಮಯ ನಾಟಕ ವಿಟ್ಲ ಚಂದಳಿಕೆ ಭಾರತ್ ಆಡಿಟೋರಿಯಂ ನಲ್ಲಿ ನಡೆಯಿತು.
ನಾಟಕ ಆರಂಭದ ಮೊದಲು ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಸತೀಶ ಆಳ್ವ ಇರಾ ಬಾಳಿಕೆರವರು ಕಲಾ ಬದುಕು ಕಲಾವಿದರ ಹೊಟ್ಟೆಪಾಡಿಗಾಗಿ ಮಾತ್ರವೇ ಅಲ್ಲ ಪ್ರೇಕ್ಷಕನ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇಲ್ಲಿ ಭಾಷೆಯೊಂದೇ ಮುಖ್ಯವಾಗದೆ ಸಂದೇಶಗಳು ಪ್ರಮುಖವಾಗುತ್ತದೆ. ಬಾಲ್ಯದ ಇಂತಹ ಹವ್ಯಾಸ, ಒಡನಾಟಗಳು ಇನ್ನೂ ನಮ್ಮವರು ಎಂಬ ಅನ್ಯೂನ್ಯ ಸಂಬಂಧ ಉಳಿಯುವಂತೆ ಮಾಡಿದೆ ಎಂದರು.

ಈ ಸಂಧರ್ಭದಲ್ಲಿ ವಿಟ್ಲ ಕಲಾ ಮತ್ತು ಶೈಕ್ಷಣಿಕ ಪೋಷಕ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಹಿರಿಯ ನಾಟಕ ಕಲಾವಿದ, ಸಂಘಟಕ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬರಹಗಾರ, ಕಲಾವಿದ, ಸಮಾಜ ಸೇವಕ, ಸಂಘಟಕ ರಾಧಾಕೃಷ್ಣ ಕುಲಾಲ್ ಎರುಂಬು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉದ್ಯಮಿ ಮತ್ತು ಕೃಷಿಕ ಕಲಾಬಂಧು ಶ್ರೀಧರ ಶೆಟ್ಟಿ ಗುಬ್ಯ, ಯಚ್. ಸುಬ್ರಮಣ್ಯ ಭಟ್ ನಿವೃತ್ತ ಉಪಪ್ರಾಂಶುಪಾಲರು ವಿಟ್ಲ, ವಿಟ್ಲ ಛೇರ್ಮನ್ ದಿಗ್ವಿಜಯ ಗ್ರೂಪ್ಸ್ ಪ್ರೈ. ಲಿಮಿಟೆಡ್ ದಿನಕರ ಭಟ್ ಮಾವೆ ದಂಪತಿ , ವಿಟ್ಲ ಶ್ರೀನಿವಾಸ ನಾಯಕ್ ಟ್ರೇಡರ್ಸ್ ಮಾಲಕ ಸುಭಾಸ್ ನಾಯಕ್, ವಿಟ್ಲ ಪ್ರಭಾ ವೈನ್ಸ್ ಮಾಲಕ ಪ್ರಭಾಕರ್ ಶೆಟ್ಟಿ ದಂಬೆಕಾನ ಕಾಟುಕುಕ್ಕೆ, ಸೂರ್ಯ ಕ್ಯಾಟರರ್ಸ್ ವಿಟ್ಲ ಭಾಸ್ಕರ ಶೆಟ್ಟಿ, ವಕೀಲ ಜಯರಾಮ ರೈ ವಿಟ್ಲ, ರಾಮ್‌ದಾಸ್ ಶೆಟ್ಟಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಹಿರಿಯ ಕಲಾವಿದ ಮತ್ತು ಹಾಸ್ಯನಟ ಮಂಗೇಶ್ ಭಟ್ ವಿಟ್ಲ, ರಾಧಾಕೃಷ್ಣ ಪ್ರಸಾದ್ ಶೆಣೈ ಉಪಸ್ಥಿತರಿದ್ದರು.
ಶ್ರೀ ದಿವ್ಯಜ್ಯೋತಿ ಮಿತ್ರ ವೃಂದದ ಗೌರವಾಧ್ಯಕ್ಷ ಮತ್ತು ನಾಟಕ ತಂಡದ ನಿರ್ದೇಶಕ ಮೋಹನದಾಸ ರೈ ಎರುಂಬು ಸ್ವಾಗತಿಸಿ, ಪ್ರಸ್ತಾವನೆಗೈದರು. ದಿವ್ಯಜ್ಯೋತಿ ಮಿತ್ರ ವೃಂದದ ಅಧ್ಯಕ್ಷ ರಾಧಾಕೃಷ್ಣಎರುಂಬು ವಂದಿಸಿದರು. ಕಲಾಬಂಧು ಶ್ರೀಧರ ಶೆಟ್ಟಿ ಗುಬ್ಯ ನಿರೂಪಿಸಿದರು. ಬಳಿಕ “ಮದಿಮೆದ ಇಲ್ಲಡ್” ತುಳು ನಾಟಕ ಪ್ರದರ್ಶನಗೊಂಡು ಜನ ಮೆಚ್ಚುಗೆ ಗಳಿಸಿತು.








