ಜೇನು ಕೃಷಿ ಹಾಗೂ ಪರಿಸರದ ಸಮತೋಲನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ರಾಧಾಕೃಷ್ಣ ಇವರಿಂದ ಮಾಹಿತಿ





ವಿಟ್ಲ: ಸರ್ಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪು ಇಲ್ಲಿಯ ಇಕೋ ಕ್ಲಬ್ ವತಿಯಿಂದ ಫೆ.06 ರಂದು ಕ್ಷೇತ್ರ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜೇನು ಕೃಷಿಗೆ ಸಂಬಂಧಿಸಿದಂತೆ ಸುಧಾಕರ್ ಪೂಜಾರಿ ಬಡೆಕೋಡಿ ಇವರ ಕೃಷಿಕೇಂದ್ರಕ್ಕೆ 8 ಹಾಗೂ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಭೇಟಿ ನೀಡಿ ಜೇನು ಕೃಷಿಯ ಹಾಗೂ ಹಲವಾರು ಪರಿಸರದ ಸಮತೋಲನದ ಬಗ್ಗೆ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ರಾಧಾಕೃಷ್ಣ ಇವರಿಂದ ಮಾಹಿತಿಯನ್ನು ಪಡೆಯಲಾಯಿತು.


ಬೆಳಗಿನ ಉಪಹಾರ ಮಧ್ಯಾಹ್ನದ ಭೋಜನವನ್ನುಅಲ್ಲಿಯೇ ಸವಿಯುವ ಸಂಭ್ರಮದ ವಾತಾವರಣದಲ್ಲಿ ಮಕ್ಕಳು ವಿಶೇಷ ಕಲಿಕೆಯನ್ನು ಪಡೆದುಕೊಂಡರು. ರೋಟರಿ ಕ್ಲಬ್ ವಿಟ್ಲ ಇದರ ಪದಾಧಿಕಾರಿಗಳಾದ ಜೈ ಕಿಶನ್ ಹಾಗೂ ಸಂಜೀವ ಪೂಜಾರಿ ಅವರು ಅತಿಥಿಗಳಾಗಿ ಆಗಮಿಸಿದ್ದರು ಶ್ರೀಮತಿ ಹರಿಣಾಕ್ಷಿ ಸುಧಾಕರ್ ಅವರ ವಿಶೇಷ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.



ಇಕೋಕ್ಲಬ್ ನೋಡೆಲ್ ಶಿಕ್ಷಕರಾದ ಲಕ್ಷ್ಮಣ ಟಿ.ನಾಯ್ಕ್ ರವರು ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಾಲತಿ.ಕೆ ಇವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ ಮತ್ತು ಶಾಂತಲ ಉಪಸ್ಥಿತರಿದ್ದರು. ಶಿಕ್ಷಕ ಶ್ರೀ ರಮೇಶ ಡಿ ಸರ್ವರನ್ನೂ ವಂದಿಸಿದರು.








