- Advertisement -
- Advertisement -



ಮಾಡತ್ತಡ್ಕ: ವಿಟ್ಲ ಮೂಡ್ನೂರು, ಕುಳ ಗ್ರಾಮದ ಶಿಬರಿಕಲ್ಲು ಮಾಡದಲ್ಲಿ ಶ್ರೀ ಮಲರಾಯ ಮೂವರ್ ದೈವಂಗಳ ಕಾಲಾವಧಿ ನೇಮೋತ್ಸವವು ದಿನಾಂಕ ಮಾರ್ಚ್4ರಿಂದ 6ರ ತನಕ ನಡೆಯಲಿರುವುದು.
ದಿನಾಂಕ ಫೆ.25 ಬುಧವಾರ 10ಗಂಟೆಗೆ ಗೊನೆ ಮೂಹೂರ್ತ ನಡೆದಿದ್ದು, ಮಾ.4 ಬುಧವಾರದಂದು ಸಂಜೆ ಗಂಟೆ 5ಕ್ಕೆ ಜೈನರಕೋಡಿಯಿಂದ ಭಂಡಾರ ಬಂದು, ಪರಿವಾರ ದೈವಗಳಿಗೆ ಬನದಲ್ಲಿ ಕಾಲಾವಧಿ ನೇಮೋತ್ಸವ ನಡೆಯಲಿದೆ. ಮಾ.5 ಗುರುವಾರದಂದು ಬೆಳಿಗ್ಗೆ 9ಗಂಟೆಗೆ ಮಲರಾಯ ಮೂವರ್ ದೈವಂಗಳಿಗೆ ತಂಬಿಲ ಸೇವೆ, ರಾತ್ರಿ ಶಿಬರಿಕಲ್ಲು ಮಾಡದಲ್ಲಿ -ಮೂವರ್ ದೈವಂಗಳ ಕಾಲಾವಧಿ ನೇಮೋತ್ಸವ ನಡೆಯಲಿದೆ. ಮಾ.6 ಶುಕ್ರವಾರದಂದು ಬೆಳಿಗ್ಗೆ ಶ್ರೀ ಮಲರಾಯ ದೈವಕ್ಕೆ ಮತ್ತು ಪಿಲಿಚಾಮುಂಡಿ ದೈವಗಳಿಗೆ ಕಾಲಾವಧಿ ನೇಮೋತ್ಸವ ನಡೆಯಲಿದೆ..ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ..
- Advertisement -








