



ವಿಟ್ಲ: ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ.) ವಿಟ್ಲ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 48ನೇ ವರ್ಷದ ಮೊಸರರು ಕುಡಿಕೆ ಉತ್ಸವ ಕಾರ್ಯಕ್ರಮವು ಸರಕಾರಿ ಪ್ರೌಢ ಶಾಲೆ (RMSA) ವಿಟ್ಲ ಇಲ್ಲಿ ನಡೆಯಿತು.


ಧಾರ್ಮಿಕ ಮುಖಂಡ ಅರುಣ್ ಪುತ್ತಿಲ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತೂರು Axis Bank ಪ್ರಭಂದಕ ಕೃಷ್ಣ ಕಿಶೋರ್ ಭಟ್, ರಾಮಕೃಷ್ಣ ಕ್ರೆಡಿಟ್ ಕೋ ಓ ಪರೇಟಿವ್ ಸೊಸೈಟಿ ಲಿ. ಬೆಳ್ಳಾರೆ ಶಾಖೆ ಸೀನಿಯರ್ ಮ್ಯಾನೇಜರ ಚಂದ್ರಹಾಸ ಶೆಟ್ಟಿ ಪಿಲಿಂಜ, ಇಡ್ಕಿದು ಸೇವಾ ಸಹಕಾರಿ ಸಂಘ ನಿವೃತ್ತ ಕಾರ್ಯನಿರ್ವಹಣಾ ಅಧಿಕಾರಿ ಈಶ್ವತ್ ನಾಯ್ಕ್, ವಿಟ್ಲ ಸುಬ್ರಹ್ಮಣ್ಯ ಸಹಕಾರಿ ಸಂಘ ವ್ಯವಸ್ಥಾಒಕ ರಾಜೇಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಾಥಮಿಕ 8ನೇ ತರಗತಿಯ ಒಳಗಿನ ಬಾಲಕ- ಬಾಲಕಿಯರ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಿತು.



ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ನೋಟರಿ ವಕೀಲ ಜಯರಾಮ್ ರೈ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಸ್ ಕೆ.ಎನ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ವೇತಾ ,ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ Rtn ಜೈಕಿಶನ್, ಯುವಕ ಮಂಡಲ ಅಧ್ಯಕ್ಷ ಸುಧೀರ್ ನಾಯ್ಕ, ಗೌರವಾಧ್ಯಕ್ಷ ಬಿ.ಎಸ್ ರಮೇಶ, ಕಾರ್ಯದರ್ಶಿ ಗಂಗಾಧರ, ಕೋಶಾಧಿಕಾರಿ ಜನಾರ್ಧನ ಪದ್ಮಶಾಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ಬಳಿಕ ಶಿವಂ ಡ್ಯಾನ್ಸ್ ವಿಟ್ಲ ಇವರಿಂದ, ಕರಾವಳಿ ಕರ್ನಾಟಕ ಹೆಸರಾಂತ ಗಾಯಕರಿಂದ ಸಂಗೀತ, ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ “ನೃತ್ಯ ನಿಂಧೂರ 2025” ನಡೆಯಿತು.












