Friday, July 31, 2026
spot_imgspot_img
spot_imgspot_img

ವಿಟ್ಲ: ಧ.ಗ್ರಾ.ಯೋ ವತಿಯಿಂದ ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ

- Advertisement -
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವಿಟ್ಲ, ಅಳಿಕೆ ವಲಯದ ಸಹಯೋಗದೊಂದಿಗೆ ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಕಾರಂತ ಎರುಂಬು ಉದ್ಘಾಟಿಸಿದರು.

ಪ್ರಗತಿಪರ ಕೃಷಿಕ ವೆಂಕಟ ಶರ್ಮ ಮುಳಿಯ ಹಾಗೂ ಜನಜಾಗೇತಿ ವೇದಿಕೆಯ ಸದಸ್ಯ ಬಾಲಕೃಷ್ಣ ಕಾರಂತ ಎರುಂಬು ಗಿಡ ನಾಟಿ ಬಗ್ಗೆ ಮಾಹಿತಿ ನೀಡಿದರು. ಈಶ್ವರ ಭಟ್ ಕಾನ ಅಧ್ಯಕ್ಷತೆ ವಹಿಸಿದ್ದರು.

ಅಳಿಕೆ ವಲಯ ಮೇಲ್ವಿಚಾರಕ ರಮೇಶ್ ಪ್ರಸ್ತಾವಿಸಿದರು. ಸದಸ್ಯ ಉದಯ ನಾಯ್ಕ ಸ್ವಾಗತಿಸಿದರು. ಭಾಗೀರಥಿ ವಂದಿಸಿದರು. ಸೇವಾಪ್ರತಿನಿಧಿ ವಿನಯ ರೈ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷೆ ಯಶೋಧ, ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಮುಳಿಯ, ಗೋಪಾಲ ಮಣಿಯಾಣಿ ಎರುಂಬು ಹಾಗೂ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!