Tuesday, April 20, 2021
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್ ವತಿಯಿಂದ ರೂ.117ಲಕ್ಷ ಅನುದಾನದ ಘನತ್ಯಾಜ್ಯ ವಾಹನಗಳ ಉದ್ಘಾಟನೆ ಹಾಗೂ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ

ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೀನು ಮಾರುಕಟ್ಟೆ, ಘನತ್ಯಾಜ್ಯ ವಾಹನಗಳ ಉದ್ಘಾಟನೆ ಮತ್ತು ಕೃಷಿ ಇಲಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಸಮಾರಂಭ ಮಂಗಳವಾರ ನಡೆಯಿತು.

ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ 53.25 ಲಕ್ಷ ಅನುದಾನದಲ್ಲಿ ಖರೀದಿಸಲಾದ 5 ಟಾಟಾ ಏಸ್, ಒಂದು ಹಿಟಾಚಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡ 30 ಲಕ್ಷ ಅನುದಾನ ನೂತನ ಮೀನು ಮಾರುಕಟ್ಟೆ ಮತ್ತು 50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕೃಷಿ ಇಲಾಖೆಯ ನೂತನ ಕಟ್ಟಡಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನಡೆಸಿದರು. ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಕೃಷಿಕರಿಗೆ ಯಂತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಸ್ವಚ್ಚತೆಯಲ್ಲಿ ಪುತ್ತೂರು ನಗರ ಆರನೇ ಸ್ಥಾನಕ್ಕೆ ಬಂದು ನಿಂತಿದೆ. ವಿಟ್ಲ ಪಟ್ಟಣ ಪಂಚಾಯತ್ ನಂ 1 ಸ್ಥಾನ ಆಗಬೇಕು.‌ ಪೌರ ಕಾರ್ಮಿಕರು ಪ್ರತಿದಿನ ಜನತೆಯನ್ನು ಎಚ್ಚರಿಸಬೇಕು. ಪೌರ ಕಾರ್ಮಿಕರ ಬಗ್ಗೆ ಗಮನ ಕೊಡುವುದು ಪಂಚಾಯತ್ ಕರ್ತವ್ಯ. ಅವರ ಸೇವೆಯನ್ನು ಗುರುತಿಸಬೇಕು. ಇದರಿಂದ ನಗರ ಸ್ವಚ್ಚವಾಗಿರುತ್ತದೆ. ನಗರ ಸ್ವಚ್ಚವಾಗಿದ್ದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳುತ್ತದೆ. ಕೇಂದ್ರ ರಾಜ್ಯ ಸರ್ಕಾರ ಅನುದಾನ ಸದ್ಬಳಕೆ ಆಗಬೇಕು. ಕೃಷಿಕರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ನಿರಂತರ ಸ್ಪಂದನೆ ನೀಡುತ್ತಿದ್ದು, ಕೃಷಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಅನುದಾನ ಬಿಡುಗಡೆಗೊಳಿಸಿದೆ ಎಂದರು.

ದ.ಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಜಯಶ್ರೀ ಕೊಡಂದೂರು, ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಮುಖ್ಯಾಧಿಕಾರಿ ಮಾಲಿನಿ, ಸದಸ್ಯರಾದ ಅರುಣ್ ಎಂ ವಿಟ್ಲ, ಜಯಂತ ನಾಯ್ಕ, ಶ್ರೀಕೃಷ್ಣ, ರಾಮ್ ದಾಸ್ ಶೆಣೈ, ಚಂದ್ರಕಾಂತಿ ಶೆಟ್ಟಿ, ಹಸೈನಾರ್ ನೆಲ್ಲಿಗುಡ್ಡೆ, ಇಂದಿರಾ ಅಡ್ಯಾಳಿ, ಲೋಕನಾಥ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಪ್ರದೀಪ್ ಡಿ ಸೋಜ, ಸಹಾಯಕ ಕೃಷಿ ನಿರ್ದೇಶಕ ಚೆನ್ನಕೇಶವ ಮೂರ್ತಿ, ಪ್ರೇಮ ಕಾಂಬ್ಳೆ, ಕೃಷಿ ಅಧಿಕಾರಿ ನಂದನ್ ಶೆಣೈ, ಸಹಾಯಕ ಕೃಷಿ ಅಧಿಕಾರಿ ಎಸ್ ಕೆ ಸರೀಕರ್,
ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕರುಣಾಕರ ನಾಯ್ತೋಟ್ಟು, ಪ್ರಮುಖರಾದ ಮೋಹನದಾಸ ಉಕ್ಕುಡ, ಉದಯ ಆಲಂಗಾರು, ಹರೀಶ್ ಪೂಜಾರಿ, ವೀರಪ್ಪ ಗೌಡ, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ವಿಟ್ಲ ಗ್ರಾ.ಪಂ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಎಂಜಿನಿಯರ್ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

MOST POPULAR

HOT NEWS

Related news

error: Content is protected !!