Sunday, October 11, 2026
spot_imgspot_img
spot_imgspot_img

ಬೆಳ್ತಂಗಡಿ: ಬಿಳಿ ರಕ್ತಕಣಗಳ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಸಾವು

- Advertisement -
- Advertisement -

ಬೆಳ್ತಂಗಡಿ: ಬಿಳಿ ರಕ್ತಕಣಗಳ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮಸ್ಥಳ ಗ್ರಾಮದ ಅಗುಳೆಬೈಲು ನಿವಾಸಿ ದಿನೇಶ್ ಮತ್ತು ಭಾರತಿ ದಂಪತಿಯ ಪುತ್ರಿ ಧೃತಿ (6) ಇಂದು ಸಾವನ್ನಪ್ಪಿದ್ದಾಳೆ.

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಗೆ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕಿಯ ಹೆಚ್ಚಿನ ಚಿಕಿತ್ಸೆಗೆ ಸುಮಾರು 25 ಲಕ್ಷ ರೂಪಾಯಿ ಖರ್ಚಾಗಬಹುದು ಎಂದು ಬೆಂಗಳೂರಿನ ವೈದ್ಯರೊಬ್ಬರು ಹೇಳಿದ್ದರಿಂದ ಹಣ ಒಟ್ಟು ಗೂಡಿಸಲು ಕುಟುಂಬದವರು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

ಅಲ್ಲದೇ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನೆರವನ್ನು ಯಾಚಿಸಿದ್ದರು. ಹಲವು ದಾನಿಗಳು ಮತ್ತು ಸಂಘ ಸಂಸ್ಥೆಗಳು ನೆರವನ್ನು ನೀಡಿದ್ದರು.ಆದರೆ ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿರೋದು ಕುಟುಂಬಕ್ಕೆ ಭಾರೀ ಆಘಾತ ಉಂಟು ಮಾಡಿದೆ

- Advertisement -

Related news

error: Content is protected !!