Thursday, August 6, 2026
spot_imgspot_img
spot_imgspot_img

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು ಜುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಕಳವು; ಮೂವರು ಅರೆಸ್ಟ್..!

- Advertisement -
- Advertisement -

ಉಡುಪಿ: ಇಲ್ಲಿನ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಕಳೆದ ತಿಂಗಳು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೂಲದ ದಂಪತಿ ಸಹಿತ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಯಿ ಝಿಂದಗಿ ನಿವಾಸಿಗಳಾದ ಆಸಿಫ್ ಅಸ್ಫಾಕ್ ಶೇಖ್ (32), ಆತನ ಪತ್ನಿ ನಾಝಿಯಾ (32), ಕುಂಬಾರಿ ಗ್ರಾಮದ ಸೌದಾಗರ್ ದಿಲೀಪ್ ಗೋಂದ್‌ ಕರ್ (35) ಎನ್ನಲಾಗಿದೆ.

ಘಟನೆಯ ವಿವರ:
ನ.23ರಂದು ಇಬ್ಬರು ಬುರ್ಖಾ ಧರಿಸಿದ ಮಹಿಳೆಯವರು, ಓರ್ವ ವ್ಯಕ್ತಿ ಹಾಗೂ ಮಗುವಿನೊಂದಿಗೆ ಗ್ರಾಹಕರ ಸೋಗಿನಲ್ಲಿ ಉಡುಪಿಯ ಸುಲ್ತಾನ್ ಗೋಲ್ಡ್ ಗೆ ಬಂದು ಒಟ್ಟು 60 ಗ್ರಾಂ ತೂಕದ 3,00,000ರೂ. ಮೌಲ್ಯದ 4 ಚಿನ್ನದ ಬಳೆಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

vtv vitla

ಈ ಕುರಿತು ತನಿಖೆ ನಡೆಸಿದ ಉಡುಪಿ ನಗರ ಪೊಲೀಸರು, ಜ್ಯುವೆಲ್ಲರಿ ಆಸುಪಾಸಿನ ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ, ಎಂಎಚ್-13- ಎಫ್-4599ನೆ ನಂಬರಿನ ತವೇರಾ ಕಾರು ಕೃತ್ಯಕ್ಕೆ ಬಳಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು. ಹೀಗೆ ಆರೋಪಿಗಳ ಜಾಡು ಹಿಡಿದು ಮಹಾರಾಷ್ಟ್ರ ರಾಜ್ಯದ ಡಿ.18ರಂದು ಸೋಲಾಪುರಕ್ಕೆ ತೆರಳಿ ನಯಿ ಜಿಂದಗಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಡಿ.19ರಂದು ಠಾಣೆಗೆ ಹಾಜರುಪಡಿಸಲಾಗಿತು. ಬಂಧಿತರಿಂದ 1 ವಾಹನ, 1 ಮೊಬೈಲ್ ಹಾಗೂ 2,99,792 ರೂ. ಮೌಲ್ಯದ ನಾಲ್ಕು ಚಿನ್ನದ ಬಳೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

vtv vitla
vtv vitla
vtv vitla
- Advertisement -

Related news

error: Content is protected !!