- Advertisement -
- Advertisement -



ಉಡುಪಿ: ಇಲ್ಲಿನ ಕಾವಾಡಿ ಗ್ರಾಮದ ಹವರಾಲು ಎಂಬಲ್ಲಿ ಬೇಟೆಗಾಗಿ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.
ನ.30ರಂದು ರಾತ್ರಿ ವೇಳೆ ಹೌರಾಲ್ ನಿವಾಸಿ ಸುರೇಶ್ ನಾಯ್ಕ ಎಂಬವರ ಮನೆಯ ಸಾಕು ನಾಯಿಯ ಬೇಟೆಗಾಗಿ ಬಂದ ಚಿರತೆಯು, ಅವರ ಆವರಣ ಇಲ್ಲದ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ವಿಚಾರ ತಿಳಿದ ಮನೆಯವರು ಕೂಡಲೇ ಬ್ರಹ್ಮಾವರ ವಲಯ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಬೋನಿನ ಮೂಲಕ ಬಾವಿಯಿಂದ ಮೇಲಕ್ಕೆಟ್ಟಿದ್ದಾರೆ.

ಇನ್ನು ಈ ಚಿರತೆಯನ್ನು ಬ್ರಹ್ಮಾವರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇರಿಸಿದ್ದು, ಇಂದು ಚಿರತೆಯನ್ನು ಮಂಗಳೂರಿನ ಪಿಲಿಕುಲಕ್ಕೆ ಒಪ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



- Advertisement -








