Friday, June 26, 2026
spot_imgspot_img
spot_imgspot_img

ಕಡಬ: ಅಕ್ರಮ‌ ಕಸಾಯಿಖಾನೆಗೆ ದಾಳಿ: ಓರ್ವ ಆರೋಪಿಯ ಬಂಧನ, 70 ಕೆಜಿ ದನದ ಮಾಂಸ ಸಹಿತ 2 ಕರುಗಳು ವಶಕ್ಕೆ

- Advertisement -
- Advertisement -

ಕಡಬ: ಅಕ್ರಮ‌ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, 70 ಕೆಜಿ ದನದ ಮಾಂಸದ ಸಹಿತ 2 ದನದ ಕರುಗಳನ್ನು ವಶಪಡಿಸಿಕೊಂಡಿದ್ದಾರೆ‌.

ಬಂಧಿತ ಆರೋಪಿಯನ್ನು ಕೊಯಿಲ ಗ್ರಾಮದ ಕೆಮ್ಮಾರ ನಿವಾಸಿ ಉಸ್ಮಾನ್ ಎಂಬವರ ಪುತ್ರ ಇಲ್ಯಾಸ್(33) ಎಂದು ಗುರುತಿಸಲಾಗಿದೆ.

ಆರೋಪಿಯು ಶುಕ್ರವಾರದಂದು ಕೊಯಿಲ ಗ್ರಾಮದ ಬಡ್ಡಮೆ ನಿವಾಸಿ ಶ್ರೀಮತಿ ಮರಿಯಮ್ಮ ಎಂಬವರ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ದನದ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಕಡಬ ಪೊಲೀಸರು 70 ಕೆಜಿ ದನದ ಮಾಂಸ ಹಾಗೂ 2 ದನದ ಕರುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಇಲಿಯಾಸ್ ನನ್ನು ದಸ್ತಗಿರಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ರವಿ, ಹೆಚ್ಸಿ ನೇತ್ರ ಕುಮಾರ್ ಹಾಗೂ ಶ್ರೀ ಶೈಲ ರವರು ಭಾಗಿಯಾಗಿದ್ದರು.

driving
- Advertisement -

Related news

error: Content is protected !!