Thursday, June 18, 2026
spot_imgspot_img
spot_imgspot_img

ಕುಡಿದ ಮತ್ತಿನಲ್ಲಿ ಕೈ ನೋಡಿ ಕೆಟ್ಟದಾಗಿ ಭವಿಷ್ಯ ಹೇಳಿದ್ದಕ್ಕೆ, ಸ್ನೇಹಿತನ್ನನ್ನೇ ಕೊಂದ ಪಾಪಿ!!

- Advertisement -
- Advertisement -

ಕೈ ನೋಡಿ ಕೆಟ್ಟದಾಗಿ ಭವಿಷ್ಯ ಹೇಳಿದ್ದಕ್ಕೆ, ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗೋವಿಂದರಾಜನಗರದ ನಿವಾಸಿ ನರೇಶ್ (34) ಕೊಲೆಯಾದ ವ್ಯಕ್ತಿ.

ನರೇಶ್ ಗಾರೆ ಕೆಲಸ ಮಾಡುತ್ತಿದ್ದು, ಮುತ್ತುರಾಜ್ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಬ್ಬರೂ ತಮ್ಮ ಸಹಚರರು ಜೂತೆಗೆ ಬಾರ್‌ವೊಂದಕ್ಕೆ ಹೋಗಿ ಮದ್ಯಪಾನ ಮಾಡಿದ್ದು, ಕುಡಿದ ಮತ್ತಿನಲ್ಲಿ ನರೇಶ್ ಸ್ನೇಹಿತ ಮುತ್ತುರಾಜ್ ಕೈ ನೋಡಿ ಭವಿಷ್ಯ ಹೇಳುವುದಾಗಿ ತಮಾಷೆ ಮಾಡಿ, ಬಳಿಕ ಕೆಟ್ಟದಾಗಿ ಭವಿಷ್ಯ ನುಡಿದಿದ್ದ. ಇದರಿಂದ ಆಕ್ರೋಶಗೊಂಡ ಮುತ್ತುರಾಜ್ ಬಾರ್‌ನಿಂದ ಹೊರ ಬಂದು ನರೇಶ್ ಜೂತೆ ಜಗಳವಾಡಿ, ರಸ್ತೆ ಬದಿ ಬಿದ್ದಿದ್ದ ಕಲ್ಲು ಎತ್ತಿಕೊಂಡು ನರೇಶ್‌ ಮುಖಕ್ಕೆ ಗುದ್ದಿದರಿಂದ ನರೇಶ್ ಗಾಯಗೊಂಡು ಮೃತಪಟ್ಟಿದ್ದಾನೆ.

ನರೇಶ್ ಮೃತಪಟ್ಟಿರುವುದು ದೃಢಪಡುತ್ತಿದ್ದಂತೆ ಆರೋಪಿ ಮುತ್ತುರಾಜ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣವು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!