Thursday, June 18, 2026
spot_imgspot_img
spot_imgspot_img

ಕೊಣಾಜೆ: ಹಸುವನ್ನು ಮನೆಗೆ ಕರೆದುಕೊಂಡು ಬರುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

- Advertisement -
- Advertisement -

ಕೊಣಾಜೆ: ಗದ್ದೆಯಲ್ಲಿ ಕಟ್ಡಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕೊಣಾಜೆಯ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾನದಬೆಟ್ಟು ಎಂಬಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಹಸನಬ್ಬ ಎಂಬವರ ಪುತ್ರ ಅಬ್ದುಲ್ ರಹಿಮಾನ್ (33) ಎಂದು ಗುರುತಿಸಲಾಗಿದೆ. ರಹಿಮಾನ್ ಅವರು ಗದ್ದೆಯಲ್ಲಿ ಕಟ್ಡಿದ್ದ ದನವನ್ನು ಬಿಡಿಸಿಕೊಂಡು ಮನೆಯತ್ತ ಬರುವ ವೇಳೆ ಸಿಡಿಲು ಬಡಿದಿದ್ದು, ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ರಹಿಮಾನ್ ಅವರು ಪತ್ನಿ ಹಾಗೂ 3 ವರ್ಷದ ಮಗು ಹಾಗೂ 40 ದಿನದ ಹಸುಗೂಸನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್, ರೆವೆನ್ಯೂ ಇನ್ ಸ್ಪೆಕ್ಟರ್ ಪ್ರಸಾದ್, ಹರೇಕಳ ಪಂಚಾಯತ್ ಅಧ್ಯಕ್ಷ, ಅಧಿಕಾರಿಗಳು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!