Tuesday, September 1, 2026
spot_imgspot_img
spot_imgspot_img

ತಂದೆ ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ನಡೆಯಲಿದೆ ಪುನೀತ್ ಅಂತ್ಯಕ್ರಿಯೆ

- Advertisement -
- Advertisement -

ಬೆಂಗಳೂರು: ಇಂದು ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ಸಾವಿಗೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ಸದ್ಯ ಪುನೀತ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕಂಠೀವರ ಸ್ಟೇಡಿಯಂನಲ್ಲಿ ಇಡಲಾಗಿದೆ.

ಇನ್ನು ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಗೆ ಸ್ಥಳ ನಿಗದಿ ಮಾಡಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸ್ಥಳ ನಿಗದಿಪಡಿಸಿ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿನ ಡಾ.ರಾಜ್‌ಕುಮಾರ್ ಸಮಾಧಿ ಸಮೀಪದಲ್ಲಿಯೇ ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.

- Advertisement -

Related news

error: Content is protected !!